ಕೇಮಾರು : ಯುವ ಉತ್ಸಾಹಿ ಬಳಗ (ರಿ.) ಕೇಮಾರು ನೇತೃತ್ವದಲ್ಲಿ , ರೋಟರಿಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಯುವಸಂಗಮ ಕಾಂತಾವರ (ರಿ.) ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ 244 ನೇ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಅಭಿಯಾನವು ಜೂ.11ರಂದು ಕೇಮಾರು ಶಾಲಾ ವಠಾರದಲ್ಲಿ ಜರಗಿತು.
ಯುವ ಉತ್ಸಾಹಿ ಬಳಗದ ಅಧ್ಯಕ್ಷರಾದ ನಿತಿನ್ ಅಮಿನ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಡ್ಕ ಗ್ರಾಮಪಂಚಾಯತ್ ಅಧ್ಯಕ್ಷರಾದ ದಿನೇಶ್ ಕಾಂಗ್ಲಾಯಿ ಉದ್ಘಾಟಿಸಿದರು. ಅಂಚೆ ಇಲಾಖೆ ಪುತ್ತೂರು ವಿಭಾಗ ಮಾರ್ಕೆಟಿಂಗ್ ಎಕ್ಸಿಟೀವ್ ಗುರುಪ್ರಸಾದ್ ಕೆ.ಎಸ್ ಮಾತನಾಡಿ ಅಂಚೆ ಇಲಾಖೆಯ ಇತರ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಹೊಸ ಆಧಾರ್ ಕಾರ್ಡ್ ನೊಂದಣಿ, ಮೊಬೈಲ್ ಸಂಖ್ಯೆ ಜೋಡಣೆ, ಹೆಸರು, ವಿಳಾಸ, ಜನ್ಮದಿನಾಂಕ , ಬಯೋಮೇಟ್ರಿಕ್ ಹಾಗೂ ಡೆಮೋಗ್ರಾಪಿಕ್ ಅಪ್ಡೇಟ್ ನಡೆಸಿದ್ದು 100ಕ್ಕೂ ಅಧಿಕ ನಾಗರಿಕರು ಆಧಾರ್ ತಿದ್ದುಪಡಿ ಶಿಬಿರದ ಸದುಪಯೋಗ ಪಡಿಸಿಕೊಂಡರು.
ರೋಟರಿ ಜಿಲ್ಲಾ ಯೋಜನಾಧಿಕಾರಿ ಹರೀಶ್ ಎಂ.ಕೆ, ರೋಟರಿಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷರಾದ ಪ್ರವೀಣ್ ಪೀರೇರಾ, ಯುವಸಂಗಮ ಕಾಂತಾವರದ ಅಧ್ಯಕ್ಷರಾದ ಅಜಿತ್ ಕುಮಾರ್, ಶಾಲಾ ಮುಖ್ಯಶಿಕ್ಷಕರಾದ ಜ್ಯೋತಿ.ಕೆ ಯುವ ಉತ್ಸಾಹಿ ಬಳಗ ಸಂಚಾಲಕರಾದ ಜೀವಂಧರ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಚಂದ್ರಹಾಸ ಜೈನ್ ಉಪಸ್ಥಿತರಿದ್ದರು. ಸುಕೇಶ್ ಕೋಟ್ಯಾನ್ ಕಾಂತಾವರ ನೀರೂಪಿಸಿ, ಯುವ ಉತ್ಸಾಹಿ ಬಳಗದ ಪ್ರಧಾನಕಾರ್ಯದರ್ಶಿ ಸುದರ್ಶನ ಆಚಾರ್ಯ ಧನ್ಯವಾದವಿತ್ತರು.
0 Comments