ಅಭಿವೃದ್ಧಿ ಕೆಲಸಗಳನ್ನು ಸರಕಾರದಿಂದ ಮಾಡಿಸಬೇಕೆಂಬ ಹಠ ಇದ್ದಾಗ ನಗರ ಅಥವಾ ಕಾಲನಿಗಳ ಅಭಿವೃದ್ಧಿ ಸಾಧ್ಯ-ಶಾಸಕ ಉಮಾನಾಥ್ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಇಲ್ಲಿನ ಕೀರ್ತಿನಗರ ಅಭಿವೃದ್ಧಿ ಸಮಿತಿಯ ವಾರ್ಷಿಕೋತ್ಸವ ಸಮಾರಂಭವು ಕೀರ್ತಿನಗರದ ರೋಟರಿ ಟೆಂಪಲ್ ಟೌನ್ ಪಾರ್ಕ್ ನಲ್ಲಿ ಭಾನುವಾರ ಸಂಜೆ ನಡೆಯಿತು. 

ಶಾಸಕ ಉಮಾನಾಥ ಕೋಟ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ಸರಕಾರ, ಪುರಸಭೆ ಅಥವಾ ನಗರಸಭೆಗಳೇ ಕೆಲಸಗಳನ್ನು ಮಾಡಲಿ ಎಂಬುದನ್ನು ಕಾಯದೆ ನಾವು ಊರಿಗಾಗಿ ಏನಾದರು ಮಾಡಬೇಕು ಅಥವಾ ಸರಕಾರದಿಂದ ಮಾಡಿಸಬೇಕೆಂಬ ಹಠ ಇದ್ದಾಗ ನಗರ ಅಥವಾ ಕಾಲನಿಗಳ ಅಭಿವೃದ್ಧಿ ಸಾಧ್ಯ. ಕಾಲನಿಗಳ ಸಮಸ್ಯೆಗಳಿಗೆ ಯಾವ ರೀತಿಯಾಗಿ ಪರಿಹಾರವನ್ನು ಕಂಡುಕೊಳ್ಳಬೇಕು ಮತ್ತು ಒಂದೇ ಕುಟುಂಬದವರಂತೆ ಒಗ್ಗಟ್ಟಾಗಿ ಹೇಗೆ ವ್ಯವಹರಿಸಬೇಕೆಂಬುದಕ್ಕೆ ಈ ಕೀರ್ತಿನಗರದ ಸಮಿತಿ ಮಾದರಿ ಎಂದ ಅವರು ಕಾಲನಿಗಳ ರಸ್ತೆ ಸಹಿತ ಸಣ್ಣಪುಟ್ಟ ಕೆಲಸಗಳಿದ್ದರೆ ಪುರಸಭೆಯ ಅಧ್ಯಕ್ಷರು ಅಥವಾ ವಾಡ್ ೯ ಸದಸ್ಯರ ಮೂಲಕ ಮಾಡಿಸಿಕೊಳ್ಳಬೇಕು ಅಲ್ಲಿ ಸಾಧ್ಯವಾಗದಿದ್ದರೆ ವಿಶೇಷ ಅನುದಾನದ ಮೂಲಕ ತಾನೇ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಡುವುದಾಗಿ ತಿಳಿಸಿದರು.

ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಾಲನಿಯಲ್ಲಿರುವ 80 ಕುಟುಂಬದವರು ಒಂದೇ ಕುಟುಂಬದವರಂತೆ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಶ್ಲಾಘನೀಯ. ಅಭಿವೃದ್ಧಿ ಕಾಮಗಾರಿಗಳಿಗೆ ಬರುವ ಅನುದಾನ ಕೊರೋನಾದಿಂದಾಗಿ ಐದೂವರೆ ಕೋಟಿಯಿಂದ ಎರಡೂವರೆ ಕೋ.ಗೆ ಇಳಿದಿದೆ. ತಾವು ತಿಳಿಸಿದಂತೆ ರಸ್ತೆಗೆ ಕಾಂಕ್ರಿಟೀಕಣದ ಕೆಲಸ ಮಾಡಲಾಗುದು. ಈಗ ಹೆಚ್ಚಿನ ಅನುದಾನ ಕಸ ವಿಲೇವಾರಿಗಾಗಿ ವಿನಿಯೋಗ ಆಗುತ್ತಿದೆ. ಅದಕ್ಕಾಗಿ ತಾವು ತಮ್ಮ ತಮ್ಮ ಮನೆಗಳಲ್ಲಿ ಶೂನ್ಯ ಕಸಸಂಗ್ರಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದಾಗ ಕಸ ವಿಲೇವಾರಿಗಾಗಿ ವಿನಿಯೋಗ ಆಗುವ ಅನುದಾವನ್ನು ಅಭಿವ್ರದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದರು.

 ಪುರಸಭಾ ಸದಸ್ಯೆ ಜಯಶ್ರೀ ಕೇಶವ, ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ನ ಅಧ್ಯಕ್ಷ ರಮೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

 ಇದಕ್ಕೂ ಮೊದಲು ಕೀರ್ತಿನಗರ  ವೃತ್ತದ ಬಳಿ ಹೈಮಾಸ್ಟ್ ದೀಪ ಮತ್ತು ಸಿಸಿ ಕೆಮರಾವನ್ನು  ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿದರು.

 ಕೀರ್ತಿನಗರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್ ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಗೀತ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕಾರ್ಯದರ್ಶಿ ರತ್ನಾಕರ ಹೆಗ್ಗಡೆ ಕಟ್ಟೆ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲ್ಲಡ್ಕ ವಿಠ್ಠಲ್ ನಾಯಕ್ ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.

Post a Comment

0 Comments