"ನನಗೆ ಮುಸ್ಲಿಮರ ಮತ ಬೇಕಾಗಿಲ್ಲ, ಅವರ ಮತಕ್ಕೆ ಕೈಯೊಡ್ಡುವ ವ್ಯಕ್ತಿಯೂ ನಾನಲ್ಲ. ಹಿಂದೂಗಳ ಮತ ಮಾತ್ರ ಸಾಕು" ಹೀಗೆಂದು ನೇರವಾದ ಮಾತುಗಳನ್ನು ಬಹಿರಂಗವಾಗಿಯೇ ಘೋಷಿಸಿದ್ದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶಾಸಕರು ಈ ರೀತಿ ಘೋಷಿಸಿಕೊಂಡಿದ್ದಾರೆ. "ನನಗೆ ಹಿಂದೂಗಳ ಮತ ಮಾತ್ರ ಸಾಕು. ಯಾಕೆಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಕಾಶಿಯಲ್ಲಿ ಕಾಶಿ ವಿಶ್ವನಾಥ ಮಂದಿರ ಹಾಗೂ ದತ್ತಪೀಠದಲ್ಲಿ ದತ್ತಾತ್ರೇಯ ಪೀಠ ನಿರ್ಮಾಣವಾಗಬೇಕೆಂಬ ಕಲ್ಪನೆಯಲ್ಲಿ ಧರ್ಮರಾಜಕಾರಣ ಮಾಡುವ ವ್ಯಕ್ತಿ ನಾನು" ಎಂದು ಹೇಳಿಕೊಂಡಿದ್ದಾರೆ. ಶಾಸಕರ ಹೇಳಿಕೆಯು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
0 Comments