ಕಂಬಳ ಕೋಣ ಓಡಿಸಿದ ಕರ್ನಾಟಕದ ರಿಯಲ್ ಹೀರೋ ಹುಸೇನ್ ಬೋಲ್ಟ್ ಸಿನಿಮಾ ರಂಗಕ್ಕೆ ಎಂಟ್ರಿ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ, ಈ ಕಂಬಳದ ಕುರಿತು  'ವೀರ ಕಂಬಳ' ಚಿತ್ರವನ್ನು ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. 

ಈ ಸಿನಿಮಾದಲ್ಲಿ ಕೋಣಗಳನ್ನು ಓಡಿಸುವುದರಲ್ಲಿ ನಿಪುಣರಾಗಿರುವ ಶ್ರೀನಿವಾಸ ಗೌಡ & ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ ರಿಯಲ್ ಆಗಿ ಕಂಬಳದ ಕೋಣ ಓಡಿಸುತ್ತಿದ್ದ ಶ್ರೀನಿವಾಸ್ ಗೌಡ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ತುಳು ಹಾಗೂ ಕನ್ನಡ ಭಾಷೆಗಳಲ್ಲಿ  ಚಿತ್ರ ಮೂಡಿ ಬರುತ್ತಿದೆ.

ಈ ಚಿತ್ರದ ಕುರಿತು ಪ್ರತಿಕ್ರಿಯಿಸಿದ ನಟ ಆದಿತ್ಯ, ವೀರ ಕಂಬಳ ಚಿತ್ರದಲ್ಲಿ ಅಭಿನಯಿಸುವ ವಿಚಾರ ನನಗೆ ತಿಳಿದಿರಲಿಲ್ಲ. ಮೊದಲಿನಿಂದಲೂ ನನಗೆ ತುಳು ಚಿತ್ರದಲ್ಲಿ ಅಭಿನಯಿಸುವ ಆಸೆ ಇತ್ತು. ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ಕರಾವಳಿ ಭಾಗದವರೆ ಎಂದು ತಿಳಿಸಿದರು. 


ಈ ಸಿನಿಮಾದಲ್ಲಿ ಆದಿತ್ಯ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದು, ಇನ್ನು ತುಳುನಾಡಿನವರೇ ಆದ ರಾಧಿಕಾ ಚೇತನ್ ಅವರು ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Post a Comment

0 Comments