ನಮ್ಮ ನಡುವಲೊಬ್ಬರು ಅಪರೂಪದ ನಾಟಿ ವೈದ್ಯೆ ನಾಗಮ್ಮ ಪೂಜಾರ್ತಿ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಪ್ರಸ್ತುತ ದಿನಗಳಲ್ಲಿ ಯಾವುದೇ ಸಣ್ಣ ಕಾಯಿಲೆ ಆರಂಭವಾದರೂ ತಲೆಗೆ ಬರುವ ಮೊದಲ ಯೋಚನೆಯೇ ಆಸ್ಪತ್ರೆ ಹೋಗಿ ಔಷಧಿ ತರಬೇಕನ್ನುವುದು, ಆದರೆ ಇಲ್ಲೊಬ್ಬರು ನಾಟಿ ವೈದ್ಯೆಯ ನ್ನು ಅರಸಿಕೊಂಡು ದೂರದ ಊರಿಂದ  ಜನರು ಬರುತ್ತಿದ್ದಾರೆ. ಇವರು ನೀಡಿದ ಯಾವುದೇ ಔಷಧಿಯಲ್ಲಿ ಗುಣವಾಗದೇ ಇರುವ ರೋಗಿಗಳೇ ಇಲ್ಲ. ಇವರು ಕುಪ್ಪೆಪದವು ಕುಳವೂರಿನ ಐನಾ ಎಂಬ ತಿಮ್ಮಪ್ಪ ಪೂಜಾರಿ ಹಾಗೂ ಓಮ ಪೂಜಾರಿಯ ೧೦ ಮಕ್ಕಳಲ್ಲಿ ೪ ನೇಯವರಾಗಿ ಜನಿಸಿದ ನಾಗಮ್ಮ ಪೂಜಾರಿ (69) ಇವರು  ಇರುವೈಲು ಕೆಂಪುಗುಡ್ಡೆಯ ಗಿರಿಯಪ್ಪ ಪೂಜಾರಿಯನ್ನು ವಿವಾಹವಾದರು. ಮೊದಲು ಇವರ  ಅತ್ತೆ ಭಾಗಿ ಪೂಜಾರಿಯವರು  ಗುಡ್ಡಗಳಿಂದ ಎಲೆ ಔಷಧಿಯ ಮೂಲಕಗಳನ್ನು ತಂದು ನಾಟ ಔಷಧಿಯನ್ನು ಮಾಡುತ್ತಿದ್ದರು. ನಂತರ ಔಷಧಿ ನೀಡುವ ಪರಂಪರೆ ಇಲ್ಲಿಗೆ ಅಳಿಯಬಾರದೆಂಬ ಉದ್ದೇಶದಿಂದ ಅತ್ತೆಯವರಿಂದ ಔಷಧಿಯ ವಿದ್ಯೆಗಳನ್ನು ಕಲಿತು ನಂತರ ಇವರು ನಾಟಿ ಔಷಧಿಗಳನ್ನು ನೀಡಲು ಆರಂಭಿಸಿದರು.

ಕೆಮ್ಮು, ಶೀತ, ಕಫ, ಜ್ವರ ಹಾಗೂ ಉಬ್ಬಸಕ್ಕೆ ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಇವರು ನಾ ಮದ್ದನ್ನು ನೀಡುತ್ತಾ ಬಂದಿದ್ದಾರೆ. ಹತ್ತಿರದ ಊರಿಂದ ಮಾತ್ರವಲ್ಲದೇ ದೂರದ ಊರುಗಳಿಂದಲ್ಲೂ ಕರೆ ಔಷಧಿಯನ್ನು ತೆಗೆದುಕೊಂಡು ಹೋಗಲು ಜನರು ಬರುತ್ತಿದ್ದು, ಆಸ್ಪತ್ರೆಗೆ ಸಾವಿರಾರು ಖರ್ಚು ಮಾಡಿ ನಂತರ ಇಲ್ಲ ಬಂದು ಗುಣಮುಖರಾಗಿ ಹೋದವರು ಅದೆಷ್ಟೋ ಉದಾಹರಣಿಗಳದೆ, ಪ್ರತಿ ಭಾನುವಾರದಂದು ಹೆಚ್ಚು ಜನರು ಬಂದು ಔಷಧಿಯನ್ನು ಪಡೆದುಕೊಂಡು ಹೋಗುತ್ತಾರೆ. ಗಿಡಮೂಲಕ ಔಷಧಿಯಿಂದ ಜನರ ಕಾಯಿಲೆಗಳು ದೂರವಾಗಲು ಮೂಲ ಕಾರಣ ಮಂತ್ರದೇವತೆ ದೈವ ಎಂಬುದು ಇವರ ನಂಬಿಕೆ, ಕಾಡುಗಳಿಂದ ಹುಡುಕಿ ತಂದ ಗಿಡಮೂಲಿಕೆಗಳಿಂದ ಔಷಧಿಯನ್ನು

ತಯಾರಿಸಿ ಮಂತ್ರದೇವತೆ ದೈವದ ಎದುರಲ್ಲಿ ತಯಾರಿಸಿದ ಔಷಧಿಯನ್ನು ಇಟ್ಟು ದೈವಕ್ಕೆ ಕೋಳಿ ಅಥವಾ ಹೂ, ಹಣ ನೀಡುವುದಾಗಿ ಹರಕೆ ಹೊತ್ತು ಔಷಧಿಯನ್ನು ಬಂದ ರೋಗಿಗಳಿಗೆ ನೀಡುತ್ತಾರೆ.

ಗೆ ಹೋಗಿ ಬೆಸೆತ್ತು ಬಂದ ಅದೆಷ್ಟೋ ಮಂದಿ ಇಲ್ಲಿ ಬಂದು ಔಷಧಿಯನ್ನು ತೆಗೆದುಕೊಂಡು ಗುಣಮುಖರಾಗಿದ್ದಾರೆ ಎಂದು ನಾಗಮ್ಮ ಪೂಜಾರಿ ಹೇಳುತ್ತಾರೆ. ವೈದ್ಯರಲ್ಲಿಗೆ ಕೊರೋನು ಸಂಕಷ್ಟದ ಲಾಕ್‌ಡೌನ್‌ ಸಮಯದಲ್ಲೂ ಜನರು ದೂರದ ಊರುಗಳಿಂದ ಒಳದಾರಿಯಾಗಿ ಬಂದು ಔಷಧಿಯನ್ನು ಪಡೆದು ಹೋಗುತ್ತಿದ್ದರು. ಇವರು ಔಷಧಿಯನ್ನು ನೀಡಿದಕ್ಕೆ ಯಾವುದೇ ಹಣವನ್ನು ತೆಗೆದುಕೊಳ್ಳದೇ ಮಂತ್ರದೇವತೆ ದೈವಕ್ಕೆ ಕೋಳಿಯನ್ನು ಕೊಡುವಂತೆ ತಿಳಿಸುತ್ತಾರೆ. ಆದರೆ ಇದೀಗ ಕೋಳಿಯನ್ನು ಕೊಡುವುದನ್ನು ನಿಲ್ಲಿಸಿದ ನಂತರ ಜನರಿಂದ ಹೂ ಅಥವಾ ದೈವಕ್ಕೆ ನೀಡುವ ಕೋಆಯ ಹಣವನ್ನು ಸಂಗ್ರಹಿಸಿ ದೈವದ ಆರಾಧನೆಗಾಗಿ ವಿನಿಯೋಗಿಸಿಕೊಳ್ಳುತ್ತಾರೆ. ಇವರಿಗೆ ಈಗ ವಯಸ್ಸಾಗಿ ಹೆಚ್ಚು ಔಷಧಿಗಳನ್ನು ಸಾಧ್ಯವಿಲ್ಲದಿರುವ ಕಾರಣ ಮಗನಾದ ಶುಭಕರ ಅವರಿಗೆ ಔಷಧಿ ಗಿಡವ ನ್ನು ಪರಿಚಯಿಸಿ ಔಷಧಿಗೆ ಬೇಕಾಗುವ ಗಿಡಮೂಲಕೆಯನ್ನು ಮಗ ತಂದುಕೊಡುತ್ತಾರೆ. ಇವರ ಔಷಧಿಯ ಗುಣದಾಗುತ್ತಿರುವ ಜನರ ಕಂಡು ಅದೆಷ್ಟೋ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನಿಸಿ ಗೌರ ವಿಸಿದೆ, ದೂರದ ಊರಿಂದ ಯಾರೇ ಜನರು ಬರುವುದಾದರೆ ತಮ್ಮ ಮಗನಿಗೆ ಕರೆ ಮಾಡಿ ಬರುತ್ತಿದ್ದೇವೆ ಎಂದು ಮುಂಚಿತವಾಗಿ ತಿಳಿಸಿರುತ್ತಾರೆ, ಅದರಂತೆ ಈ ನಾಟಿ ವೈದ್ಯೆ ಔಷಧಿಯನ್ನು ತಯಾರಿಸಿಡುತ್ತಾರೆ. ದಿನ ನಿತ್ಯವೂ ಔಷಧಿಗಾಗಿ ಜನ ಬರುತ್ತಿದ್ದು ರವಿವಾರದಂದು ಹೆಚ್ಚು ಜನರು ಬರುತ್ತಾರೆಂದು ನಾಗಮ್ಮ ತಿಳಿಸುತ್ತಾರೆ.

Post a Comment

0 Comments