ಎಂ.ಬಿ.ಬಿಎಸ್ ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯದಲ್ಲೇ ಪ್ರಥಮ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ :2022ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ನಡೆದ ರಾಷ್ಟ್ರ ಮಟ್ಟದ ನೀಟ್‌ಪರೀಕ್ಷೆ ಆಧಾರಿತ ಎಂ.ಬಿ.ಬಿಎಸ್ ವೈದ್ಯಕೀಯ ಶಿಕ್ಷಣದ ಸೀಟ್‌ಗಳು ಹಂಚಿಕೆಯಾಗಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ೩೭೭ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ರಾಜ್ಯದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಅತೀ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ ತಿಳಿಸಿದರು.

ಅವರು ಶನಿವಾರ ವಿದ್ಯಾಗಿರಿಯ ತಮ್ಮ  ಶೋಭಾ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಪತ್ರಕರ್ತರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.

ದೇಶದ ಪ್ರತಿಷ್ಠಿತ ಎಐಐಎಂಎಸ್ ದೆಹಲಿಗೆ ಇಬ್ಬರು ವಿದ್ಯಾರ್ಥಿಗಳಾದ ಹರ್ಷಿತಾ ಗಂಗಾಧರಪ್ಪ ನೆಗಲೂರು ಮತ್ತು ಶೈಕ್ಷಾ ನಾಯಕ ಬಿ ಪಿ, ಎಐಐಎಂಎಸ್  ರಾಯಬರೇಲಿಗೆ ರಕ್ಷಿತ್ ಪರೀಕ್ ಆಯ್ಕೆಯಾಗಿದ್ದು, ಪುಣೆಯಲ್ಲಿರುವ ಆರ್ಮ್‌ಡ್‌ಫೋರ್ಸಸ್ ಮೆಡಿಕಲ್ ಗೆ ಶಿವರಾಜ್ ಎಮ್ ಉಮ್ಮಜಪ್ಪನ್ವರ್ ಹೀಗೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ಒಂದು ವರ್ಷದಲ್ಲಿ ಒಂದು ಕಾಲೇಜಿನಿಂದ ಪ್ರವೇಶ ಪಡೆದ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲೆ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸಂದಿದೆ.

ರಾಜ್ಯದ ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ೨೧೩ ವಿದ್ಯಾರ್ಥಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟದಲ್ಲಿ ೧೦೬ ವಿದ್ಯಾರ್ಥಿಗಳು, ಖಾಸಗಿ ಕೋಟಾದಲ್ಲಿ ೫೮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದಾರೆ.  ವಿದ್ಯಾರ್ಥಿಗಳಲ್ಲಿ ೩೦ ಎಸ್.ಸಿ. ವಿದ್ಯಾರ್ಥಿಗಳು, ೧೫ ಎಸ್.ಟಿ. ವಿದ್ಯಾರ್ಥಿಗಳು, ೨೯ ಕನ್ನಡ ಮಾಧ್ಯಮ ಕೋಟಾವಿದ್ಯಾರ್ಥಿಗಳು  ಹಾಗೂ ಹೈದರಾಬಾದ್ ಕರ್ನಾಟಕ ಕೋಟಾದಡಿಯಲ್ಲಿ ೫೧ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುತ್ತಾರೆ. ಈ ಎಲ್ಲಾ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳೆನ್ನುವುದು ಗಮನಾರ್ಹವಾಗಿದೆ.  


ಆಳ್ವಾಸ್ ಪದವಿಪೂರ್ವ ಕಾಲೇಜಿನಿಂದ ಆಯ್ಕೆಯಾಗಿ ಎಂ.ಬಿ.ಬಿ.ಎಸ್ ವೈದ್ಯಕೀಯ ಶಿಕ್ಷಣ ಪಡೆಯಲಿರುವ ೩೭೭ ವಿದ್ಯಾರ್ಥಿಗಳಲ್ಲಿ ೧೫೦ ವಿದ್ಯಾರ್ಥಿಗಳು ದತ್ತು ಸ್ವೀಕಾರ ಯೋಜನೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಈ ವಿದ್ಯಾರ್ಥಿಗಳಿಗೆ ರೂಪಾಯಿ  ಮೂರು ಕೋಟಿಗೂ ಮಿಕ್ಕಿದ ಮೊತ್ತದ ಹಣವನ್ನು ಸಂಸ್ಥೆಯು ಸೇವಾ ರೂಪದಲ್ಲಿ ವಿನಿಯೋಗಿಸಿದೆ. ಎಂ.ಬಿ.ಬಿ.ಎಸ್ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ  ಅರ್ಹರಾದ ವಿದ್ಯಾರ್ಥಿಗಳನ್ನು  ಡಾ| ಎಂ. ಮೋಹನ ಆಳ್ವ ಮತ್ತು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಸದಾಕತ್‌ರವರು ಅಭಿನಂದನೆಯನ್ನು ಸೂಚಿಸಿದರು.



Post a Comment

0 Comments