ಅವರು ಶುಕ್ರವಾರದಂದು ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೆಲ ಸರಕಾರಿ ನೌಕರರು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಬೇಕೊ, ಬೇಡವೋ ಎಂಬ ಕೆಲಸ ಮಾಡುತ್ತಾ, ಜನರನ್ನು ಯಾಮರಿಸಿ ಕಷ್ಟಕ್ಕೀಡಾಗುವಂತೆ ಉಂಟು ಮಾಡುತ್ತಿದ್ದು, ಈ ಎಲ್ಲಾ ವ್ಯವಸ್ಥಿತ ಷಡ್ಯಂತ್ರಗಳಿಂದ ಜನಸಾಮಾನ್ಯರನ್ನು ರಕ್ಷಿಸಬೇಕಾಗಿದೆ ಎಂದರು.
ಜನ ಸಾಮಾನ್ಯರ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ತಿಳುವಳಿಕೆಯನ್ನು ಮುಟ್ಟಿಸುವ ಉದ್ದೇಶದಿಂದ ಕರ್ನಾಟಕ ರಾಷ್ಟ್ರ ಸಮಿತಿಯು ಜನಸ್ಪಂದನಾ ಹಾಗೂ ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕಾರವನ್ನು ಇಡೀ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದು, ಇದರಂತೆ ಮಾರ್ಚ್ ೧೭ರಂದು ಮೂಡುಬಿದಿರೆಯಲ್ಲೂ ಜನಸ್ಪಂದನ ಕರ‍್ಯಕ್ರಮವನ್ನು ಏರ್ಪಾಡಿಸಲಾಗಿತ್ತು. ಈ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಪ್ರಜೆಯ ಪರವಾಗಿ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಒಳ ಹೋಗಿ ಅಧಿಕಾರಿಯನ್ನು ಪ್ರಶ್ನಿಸಿದಾಗ ಮೂಡುಬಿದಿರೆ ತಾಲೂಕು ಕಛೇರಿಯ ಆಹಾರ ನಿರೀಕ್ಷಕರಾಗಿರುವ ಜಯಶ್ರೀ ಮೇಲಿನ ಮಣಿಯವರೊಂದಿಗೆ ಸಂಘರ್ಷಣೆ ಏರ್ಪಾಟ್ಟು, ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಹಂತ ತಲುಪಿದೆ. ಇದರಿಂದ ಸಾರ್ವಜನಿಕರಿಗೆ ಕಛೇರಿಯ ಒಳಗಿರುವ ಸರಕಾರಿ ನೌಕರರನ್ನು ಇತರ ವ್ಯಕ್ತಿಗಳಿಂದ ಗುರುತಿಸಲು ಅಸಾಧ್ಯ. ಹಾಗಾಗಿ ಸರಕಾರಿ ನೌಕರರು ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಹೊಂದಿಕೊಳ್ಳುವಂತೆ ಕ್ರಮವಹಿಸಬೇಕೆಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷವು ರಾಜ್ಯ ಸರಕಾರವನ್ನು ಅಗ್ರಹಿಸುತ್ತಿದೆ ಎಂದು ತಿಳಿಸಿದರು.



0 Comments