ಬೆಳಗಾವಿಯಲ್ಲಿ ಮೂಡುಬಿದಿರೆ ಯುವಕನಿಗೆ ಬಹುಮಾನ-ಪೊಲೀಸ್ ಕಾನ್ಸ್‌ಟೇಬಲ್ ಕ್ರೀಡೆಯಲ್ಲಿ ಅಜಿತ್ ಪ್ರಥಮ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಳಗಾವಿ:  ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ವಿಶೇಷ ಮೀಸಲು ಪೋಲಿಸ್ ಕಾನ್ಸ್‌ಟೇಬಲ್ ಗಳ ಪ್ರಶಿಕ್ಷಣಾರ್ಥಿಗಳ ನಾಲ್ಕನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ನಡೆದಂತಹ ವಿವಿಧ ಕ್ರೀಡಾಕೂಟದಲ್ಲಿ ಹೊರಾಂಗಣ ವಿಭಾಗದ ಕ್ರೀಡೆಯಲ್ಲಿ ಪಣಪಿಲ ಗ್ರಾಮದ ಅಜಿತ್ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರಸ್ತುತ ರಾಜ್ಯ ಮೀಸಲು ಪೋಲಿಸ್ ನಾಲ್ಕನೇ ತಂಡದ ತರಬೇತುದಾರರಾಗಿ ಕಳೆದ 6ತಿಂಗಳಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಇವರು ಪಣಪಿಲ ಗ್ರಾಮದ ಸೇಣರ ಬೆಟ್ಟು ನಿವಾಸಿಗಳಾದ ರಮಾನಾಥ್ ಸಾಲ್ಯಾನ್ ಹಾಗೂ ಪುಷ್ಪ ದಂಪತಿಗಳ ಪುತ್ರ. 

ಪ್ರಥಮ ಸ್ಥಾನ ಪಡೆದ ಅಜಿತ್ ಅವರಿಗೆ ರಾಜ್ಯ ಸಚಿವರಾದ ಅರಗ ಜ್ಞಾನೇಂದ್ರರವರು ಪ್ರಶಸ್ತಿ ಪ್ರದಾನ ಗೈದರು. 

ಅಪರ ಪೋಲಿಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಪೊಲೀಸ್ ಮಹಾನಿರೀಕ್ಷಕ ರವಿ ಎಸ್., ಹೆಚ್ಚುವರಿ ತರಬೇತಿ ಶಾಲೆ ಬೆಳಗಾವಿ ಪ್ರಾಂಶುಪಾಲ ಹಂಜ ಹುಸೇನ್ ಉಪಸ್ಥಿತರಿದ್ದರು.

Post a Comment

0 Comments