ಸಂಸತ್ತಿನ ಉಭಯ ಸದನಗಳ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಜಾಹೀರಾತು/Advertisment
ಜಾಹೀರಾತು/Advertisment

 

ನವದಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಬಜೆಟ್ ಅಧಿವೇಶನದ ಕಲಾಪವನ್ನು ಗುರುವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಅಧಿವೇಶನವನ್ನು ನಿಗದಿತ ಸಮಯಕ್ಕಿಂತ ಒಂದು ದಿನ ಮುಂಚಿತವಾಗಿ (ಗುರುವಾರ) ಮುಕ್ತಾಯಗೊಳಿಸಲಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಂದು ಪ್ರಾರಂಭವಾಗಿತ್ತು.

ಕೇಂದ್ರ ಬಜೆಟ್ ಮಂಡನೆ ನಂತರ ಫೆಬ್ರುವರಿ 11ರಂದು ಮೊದಲಾರ್ಧ ಅಧಿವೇಶನ ಕೊನೆಗೊಂಡಿತ್ತು. ಬಜೆಟ್ ಅಧಿವೇಶನದ ದ್ವಿತೀಯಾರ್ಧವು ಮಾರ್ಚ್ 14ರಂದು ಪ್ರಾರಂಭವಾಗಿತ್ತು. ವೇಳಾಪಟ್ಟಿ ಪ್ರಕಾರ ಅಧಿವೇಶನವು ಏಪ್ರಿಲ್ 8ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ  ಬಜೆಟ್ ಅಧಿವೇಶನದ ಕಲಾಪವನ್ನು  ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

Post a Comment

0 Comments