ಲಖನೌ : ಇನ್ನು ಮುಂದೆ ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲಿಗೆ ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬದ್ಧ ಕಾನೂನುಗಳನ್ನು ರೂಪಿಸುವುದು ಯುಪಿ ಯೋಗಿ ಅವರಿಗೆ ಹೊಸತೇನಲ್ಲ. ಈ ಹಿಂದೆಯೂ ಅನೇಕ ಕಾನೂನುಗಳನ್ನು ಜಾರಿಗೊಳಿಸಿದರೆ. ಅದೇ ರಾಜ್ಯದ ಸಚಿವರುಗಳು ಇನ್ನು ಮುಂದೆ ಯಾವುದೇ ಭಾಗಗಳಿಗೆ ತೆರಳಿದರೆ ಸರ್ಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು. ಅಧಿಕೃತ ಸಭೆಗಳು ನಡೆಯುವ ಅಧಿಕಾರಿಗಳು ತೆಗೆದುಕೊಳ್ಳುವ ಭೋಜನ ವಿರಾಮವನ್ನು ಅರ್ಧ ಗಂಟೆಗೆ ಸೀಮಿತಗೊಳಿಸಬೇಕು. ಮೇಜಿನ ಮೇಲೆ ಬಂದು ಬೀಳುವ ಕಡತಗಳು ಮೂರು ದಿನಗಳ ಒಳಗೆ ವಿಲೇವಾರಿಯಾಗಬೇಕು. ಕಚೇರಿಗಳಲ್ಲಿ ನಾಗರಿಕ ಸನ್ನದು ನೇತುಹಾಕಬೇಕು. ಆ ಮೂಲಕ ಯಾವುದೇ ಕೆಲಸ ಬಾಕಿ ಉಳಿಯದಂತೆ ಕಾರ್ಯನಿರ್ವಹಿಸಬೇಕು.
ಆದೇಶ ಪಾಲಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರ ನೂತನ ಆದೇಶವನ್ನು ಪ್ರಕಟಿಸಲಾಗಿದೆ. ಇದರಿಂದ ಸಚಿವರು ಹೆಚ್ಚಿನ ಹಣವನ್ನು ವ್ಯಯಿಸುವುದನ್ನು ತಪ್ಪಿಸುವ ಜೊತೆಗೆ, ಅಧಿಕಾರಿಗಳು ದಕ್ಷತೆಯೂ ಹೆಚ್ಚಾಗುತ್ತದೆ. ಸಾರ್ವಜನಿಕರಿಗೆ ಕ್ಷಿಪ್ರವಾಗಿ ಸರ್ಕಾರಿ ಸೇವೆಗಳು ಸಹ ದೊರೆಯಲಿವೆ. ಹಾಗೆ, ಕುಟುಂಬಸ್ಥರನ್ನು ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸಬಾರದು ಎಂದು ಹೊಸ ಆದೇಶ ಹೊರಡಿಸಿದ್ದಾರೆ.
0 Comments