ಮೂಡುಬಿದಿರೆ: ಪರಿಸರ ಪ್ರೇಮಿ, ಎಂಜಿನಿಯರ್ ಮೂಡುಬಿದಿರೆ ರಾಮಚಂದ್ರ ಆಚಾರ್ಯ (೭೯) ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಹಾಗೂ ವಾಸ್ತು ತಜ್ಞರಾಗಿ ಆರು ದಶಕಗಳ ನಿರಂತರ ಸೇವೆ ಮತ್ತು ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ.
ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯ ಬಗ್ಗೆ ಒಲವನ್ನು ಹೊಂದಿದ್ದರು. ಸೌಮ್ಯ ನಡವಳಿಕೆಯ ವ್ಯಕ್ತಿತ್ವವನ್ನು ಹೊಂದಿದ ಅವರು ಮೂಡುಬಿದಿರೆ ಶ್ರೀ ವಿಶ್ವಕರ್ಮ ಯುವಕ ಸೇವಾ ಸಂಘದ ಮಾಜಿ ಅಧ್ಯಕ್ಷ, ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ಹಾಗೂ ಕಾಳಿಕಾಂಬಾ ದೇವಳದಲ್ಲಿ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು.
ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರ ಸಹಪಾಠಿಯಾಗಿದ್ದರು.
ಮಾಜಿ ಸಚಿವರಾದ ವೀರಪ್ಪ ಮೊಯ್ಲಿ ಹಾಗೂ ಅಭಯಚಂದ್ರ ಜೈನ್, ಉಮಾನಾಥ್ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮೂಡುಬಿದಿರೆ ಅರಮನೆಯ ಕುಲದೀಪ್, ಆದರ್ಶ್, ಸಾಹಿತಿ ಡಾ. ನಾ. ಮೊಗಸಾಲೆ,ಕೊಡ್ಯಡ್ಕ ಜಯರಾಮ ಹೆಗ್ಡೆ, ಪಡ್ಯಾರಬೆಟ್ಟ ಜೀವಂಧರ ಕುಮಾರ್, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆ.ಮೊಕ್ತೇಸರ ಜಯಕರ ಆಚಾರ್ಯ, ಎಂ. ಸಿ. ಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ತಿಮ್ಮಯ್ಯ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
0 Comments