ನೀರ್ಕೆರೆ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಹೋಳಿ ಹಬ್ಬ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ:  ಪೂಮಾರ್ ವಾಡೋ ಕುಡುಬಿ ಕೂಡುಕಟ್ಟು ಇದರ ಸಾಂಪ್ರದಾಯಿಕ ಹೋಳಿ ಹಬ್ಬವು ನೀರ್ಕೆರೆ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ,ಜಾನಪದ ಗುಮಟೆ ನೃತ್ಯ, ಕೋಲಾಟ ನೃತ್ಯ ಮತ್ತು ಹುಲಿವೇಷ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಇಂದು ನಡೆಯಿತು

ಹೋಳಿ ಬಂತೆಂದರೆ ಸಾಕು ಎಲ್ಲರ ಮನದಲ್ಲಿ ಬಣ್ಣದ ರಂಗಿನಾಟದ ಹೋಳಿ ಕಣ್ಣಮುಂದೆ ಬರುವುದು ಸಾಮಾನ್ಯ.., ಇದಕ್ಕೆ ಅಪವಾದವೆಂಬಂತೆ ಗೋವಾದಿಂದ ವಲಸೆ ಬಂದು ಕರಾವಲಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆನಿಂತು ಪ್ರಕೃತಿ ಆರಾಧನೆಯೊಂದಿಗೆ ಸಂಸ್ಕೃತಿ, ಸಂಪ್ರದಾಯ ವನ್ನು ವಿಭಿನ್ನ ರೀತಿಯಲ್ಲಿ ಉಳಿಸಿ ಬೆಳೆಸುತ್ತಿರುವ ಕುಡುಬಿ ಸಮುದಾಯದ ಹೋಳಿ ಹಬ್ಬದ ಆಚರಣೆ ವಿಶಿಷ್ಟವಾದುದು, ತಲೆ ತುಂಬಾ ಕನಾಕಂಬರ ಮುಡಿದು,  ರಾಮಾಯಣದ ಹಾಡುಗಳನ್ನು ಹಾಡುತ್ತ ಗುಮಟೆ ಕುಣಿತ, ಕೋಲಾಟ ನೃತ್ಯವನ್ನು ನೋಡುವುದೇ ಸೊಗಸು.., ರಾಮಾಯಣದ ರಾವಣನ ವಧೆ, ರಾಮ ಸೇತು ನಿರ್ಮಿಸಿ. , ಸೀತಾದೇವಿಯು ಅಗ್ನಿ ಪ್ರವೇಶ ಮಾಡುವ ಸನ್ನಿವೇಶದೊಂದಿಗೆ ಗುಮಟೆ ಕಲಾವಿದರು  ಅಗ್ನಿ ಪ್ರವೇಶ ಮಾಡಿ  ಓಕುಲಿ ಸ್ನಾನದ ನಂತರ ಅನ್ನಸಂತರ್ಪಣೆಯೊಂದಿಗೆ ಹೋಳಿ ಸಂಪನ್ನಗೊಳ್ಳುತ್ತದೆ.

 ಸಂದರ್ಭದಲ್ಲಿ ವಾಡೆಯ ಗುರಿಕಾರ ಸಂಜೀವ ಗೌಡ, ಪ್ರಮುಖರಾದ ಹೊನ್ನಪ್ಪ ಗೌಡ, ಶಿವಪ್ಪಗೌಡ , ವಾಡೆಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು

Post a Comment

0 Comments