ಪರೀಕ್ಷೆ ನಿರಾಕರಣೆ ಆರೋಪಿಸಿ ಹಿಜಾಬ್ ಧಾರಿ ವಿದ್ಯಾರ್ಥಿಗಳ ಆಕ್ರೋಶ

ಜಾಹೀರಾತು/Advertisment
ಜಾಹೀರಾತು/Advertisment

 


ಮಂಗಳೂರಿನಲ್ಲಿ ಮುಗಿಯದ ಹಿಜಾಬ್ ಗೊಂದಲ: ಸೈಂಟ್ ರೇಮಂಡ್ಸ್‌ ಕಾಲೇಜಿನಲ್ಲಿ ಹಿಜಾಬ್‌ಧಾರಿಣಿಯರು ಹೊರಕ್ಕೆ ..

ಮಂಗಳೂರು:ಹೈಕೋರ್ಟ್‌ ಹಿಜಾಬ್‌ ಕುರಿತಂತೆ ತೀರ್ಪು ನೀಡಿದ ಬಳಿಕವೂ ಮತ್ತೆ ಕಾಲೇಜಿನಲ್ಲಿ ಹಿಜಾಬ್‌ ವಿವಾದ ಸೃಷ್ಟಿಯಾಗಿದ್ದು, ನಗರದ ವಾಮಂಜೂರಿನಲ್ಲಿರುವ ಸೈಂಟ್ ರೇಮಂಡ್‌ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನಲ್ಲಿ ಇದೀಗ ಹಿಜಾಬ್ ವಿವಾದ ಸ್ಪೋಟಿಸಿದೆ.

 

ನಗರ ಹೊರವಲಯದಲ್ಲಿರುವ ಸೈಂಟ್‌ ರೇಮಂಡ್ಸ್‌ ಕಾಲೇಜಿನಲ್ಲಿ ಹಿಜಾಬ್ ವಿವಾದ ಆತಂಕವನ್ನು ಸೃಷ್ಟಿಸಿದೆ. ಹಿಜಾಬ್‌ ಹಾಕಿಕೊಂಡೇ ಪರೀಕ್ಷೆ ಬರೆಯಲೆಂದು ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪರೀಕ್ಷೆಗೆ ಅವಕಾಶಲಿಲ್ಲ ಎಂದು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆ ವಿರುದ್ಧ ಆರೋಪಿಸಿದ್ದಾರೆ.


ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಜಾಬ್‌ ವಿದ್ಯಾರ್ಥಿನಿಯರು, ಇದುವರೆಗೆ ನಾವು ಎಲ್ಲಾ ಪರೀಕ್ಷೆಗಳಲ್ಲೂ ಹಿಜಾಬ್‌ ಧರಿಸಿ ಪರೀಕ್ಷೆ ಬರೆದಿದ್ದೇವೆ. ಆದರೆ ಏಕಾಏಕಿ ನಮ್ಮನ್ನು ಪರೀಕ್ಷೆ ಬರೆಯಲು ಇಂದು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ನಮಗೆ ಎಲ್ಲಾ ಸೌಲಭ್ಯ ನೀಡುತ್ತೇವೆ ಎಂದು ನಮ್ಮ ಪ್ರವೇಶದ ಸಂದರ್ಭದಲ್ಲಿ ಹೇಳಿದ ಪ್ರಾಂಶುಪಾಲರು ಈಗ ನಮ್ಮನ್ನು ಮಾಸ್ಕ್‌ ಮತ್ತು ಸ್ಕಾರ್ಫ್‌ ಹಾಕಿ ಟೆರರಿಸ್ಟ್‌ ತರ ಕಾಣುತ್ತಿದ್ದೇವೆ ಎಂದು ಆರೋಪಿಸಿದ್ದಾರೆ.

ಕಾಲೇಜಿನ ಪ್ರಾಂಶುಪಾಲರು ಸಹಿತ ಶಿಕ್ಷಕಿ ಕೂಡಾ ನಮ್ಮನ್ನು ನಿಂದಿಸಿದ್ದಾರೆ. ನಮ್ಮನ್ನು ತಾರತಮ್ಯ ಭಾವನೆಯಿಂದ ನೋಡಲಾಗುತ್ತಿದೆ. ಇದನ್ನು ನಾವು ಸಹಿಸಲ್ಲ. ಶಿಕ್ಷಣ ಸಂಸ್ಥೆಯ ನೀತಿ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪರೀಕ್ಷೆ ಬರೆಯದೇ 26 ವಿದ್ಯಾರ್ಥಿಗಳು ಹಾಗೂ 18 ವಿದ್ಯಾರ್ಥಿನಿಯರು ಮನೆಗೆ ವಾಪಾಸ್ಸಾಗಿದ್ದಾರೆ. ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳ ಪೋಷಕರು ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಿದರು.

ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಂಕನಾಡಿ ಗ್ರಾಮಾಂತರ ಠಾಣಾ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.

Post a Comment

0 Comments