ಮೂಡುಬಿದಿರೆ: ರಾಜ್ಯದ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆರಂಭವಾಗಿದ್ದು, ಸುಮಾರು 15,000 ಹುದ್ದೆಗಳು ಖಾಲಿ ಇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಈ ವರ್ಷದ ಅರ್ಜಿಗಳನ್ನು ಸಲ್ಲಿಸಲು ಆರಂಭದ ದಿನ ಮಾರ್ಚ್ 23 ರಿಂದ ಎಪ್ರಿಲ್ 22ರ ವರೆಗೆ ಅವಧಿ ನೀಡಲಾಗಿದೆ. ಈ ಹುದ್ದೆಯ ಪರೀಕ್ಷಾ ಅವಧಿಯನ್ನು ದಿನಾಂಕ ಮೇ 21 ಮತ್ತು 22 ರಂದು ನಡೆಸಲಾಗುತ್ತದೆ.
ನೇಮಕಾತಿ:
ಒಟ್ಟಾಗಿ 15000 ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು 6ರಿಂದ 8ನೇ ತರಗತಿವರೆಗೆ ನೇಮಕ ಮಾಡಲಾಗುತ್ತದೆ. ಇವರ ವೇತನವು ರೂ. 22650 ದಿಂದ 52650ರವರೆಗೆ ಇರಲಿದೆ.
ಕನಿಷ್ಠ ವಿದ್ಯಾರ್ಹತೆ:
ಸರಾಸರಿ ಶೇಕಡಾ 50 ಅಂಕಗಳೊಂದಿಗೆ ಪದವಿ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಅಥವಾ ಡಿಪ್ಲೋಮಾದಲ್ಲಿ ವಿಶೇಷ ಶಿಕ್ಷಣ ಪಡೆದಿರಬೇಕು. ಅಥವಾ ಶೇಕಡಾ 50 ಅಂಕಗಳೊಂದಿಗೆ ಪದವಿ ಹಾಗೂ ಶಿಕ್ಷಣದ ವಿಷಯದಲ್ಲಿ ಅಥವಾ ವಿಶೇಷ ಶಿಕ್ಷಣದಲ್ಲಿ ಪದವಿಯನ್ನು ಹೊಂದಿರಬೇಕು. ಇಲ್ಲದೇ ಹೋದಲ್ಲಿ ಶೇಕಡಾ 50 ಅಂಕಗಳೊಂದಿಗೆ ಪದವಿ ಪೂರ್ವ ಶಿಕ್ಷಣ ಹಾಗೂ ನಾಲ್ಕು ವರ್ಷಗಳ ಪ್ರಾಥಮಿಕ ಶಿಕ್ಷಣ ವಿಷಯದಲ್ಲಿ ಪದವಿ ಅಥವಾ ನಾಲ್ಕು ವರ್ಷಗಳ ಶಿಕ್ಷಣ ವಿಷಯದಲ್ಲಿ ಪದವೀಧರರಾಗಿರಬೇಕು.
0 Comments