ಬ್ರಹ್ಮಶ್ರೀ ಗುರುನಾರಾಯಣ ಸೇವಾಸಂಘ ಇರುವೈಲು ಇಲ್ಲಿ ನಡೆದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮೂಡುಬಿದಿರೆ ತಾಲೂಕಿನ ತಹಶೀಲ್ದಾರ ಪುಟ್ಟರಾಜು ಮಾತನಾಡಿ, ಸರಕಾರಿ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ತಂದಿರುತ್ತದೆ. ಆದರೆ ಅದು ಗ್ರಾಮಗಳ ಮೂಲೆ-ಮೂಲೆಗಳಿಗೆ ತಲುಪಲ್ಲ. ಅಂತಹ ಸೌಲಭ್ಯಗಳನ್ನು ಕುಗ್ರಾಮಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಳ್ಳಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಯೋಜನೆಯನ್ನು ಸರ್ಕಾರವು ಹಮ್ಮಿಕೊಂಡಿದೆ. ಹಾಗಾಗಿ ಗ್ರಾಮದ ಪ್ರತಿಯೊಬ್ಬರ ಸಮಸ್ಯೆಗಳನ್ನು ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳ ಜೊತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ನಂತರ ತಹಶೀಲ್ದಾರರು ಇರುವೈಲು ವ್ಯಾಪ್ತಿಯ ಎಸ್.ಸಿ ಕಾಲೋನಿ, ಅಂಗನವಾಡಿ ಕೇಂದ್ರ ಹಾಗೂ ಕಾಪಿಕಾಡು 94ಸಿ. ಯ ಹಕ್ಕು ಪತ್ರ ಸಮಸ್ಯೆಗಳ ಬಗ್ಗೆ ಜನರಿಗೆ ಸ್ಪಂದಿಸಲು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು.
ಪಶು ವೈದ್ಯಾಧಿಕಾರಿ ಡಾ. ಸುಭಾಸ್ ಮಾತನಾಡಿ ಜಾನುವಾರುಗಳ ಬಗ್ಗೆ ಮಾಹಿತಿ ನೀಡಿ ಈಗಾಗಲೇ ಜಾನುವಾರುಗಳಿಗೆ ಕಾಲು ಮತ್ತು ಬಾಯಿಗೆ ಲಸಿಕೆ ಹಾಕಿದ್ದೇವೆ. ಇದರಲ್ಲಿ ಪ್ರಮುಖವಾಗಿ 6 ರಿಂದ 8 ಹೆಣ್ಣು ಕರುಗಳು ಒಳಪಟ್ಟಿದೆ. ಪಶುಸಂಗೋಪಣೆಗೆ ಮೂಡುಬಿದಿರೆಯಲ್ಲಿ ಸೂಕ್ತ ಆರೋಗ್ಯ ಕೇಂದ್ರವಿದ್ದು, ಇರುವೈಲಿನಲ್ಲಿ ಶಾಶ್ವತವಾಗಿ ಪಶುಸಂಗೋಪಣಾ ಕೇಂದ್ರವಿರುವಂತೆ ಮಾಡಬೇಕೆಂದು ಪಂಚಾಯತ್ ಅಧ್ಯಕ್ಷ ಮನವಿ ಮಾಡಿದರು. ಟಿ.ಎಸ್.ಪಿ ಮತ್ತು ಎಸ್.ಪಿ ಯಲ್ಲಿ ಈ ವರ್ಷದ ಸವಲತ್ತನ್ನು ಚಂದ್ರಶೇಖರ್ ನಾಯ್ಕ್ ಪೂವಣಿಬೆಟ್ಟು ಅವರಿಗೆ ನೀಡಲಾಗಿದೆ.
ಸ. ವಲಯ ಅರಣ್ಯ ಅಧಿಕಾರಿ ಅಶ್ವಿತ್ ಗಟ್ಟಿ ಮಾತನಾಡಿ, ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣ, ಅದರ ಮಾರ್ಗದರ್ಶಿ ಸೂತ್ರಗಳನ್ವಯ ಮತ್ತೊಮ್ಮೆ ಪ್ರದೇಶ ಪರಿಶೀಲನೆ ನಡೆಸಿ ಡೀಮ್ಡ್ ಫಾರೆಸ್ಟ್ ಅಲ್ಲದ ಜಾಗಗಳನ್ನು ಪ್ರತ್ಯೇಕಿಸಿಕೊಡಲಾಗುವುದು ಎಂದರು.
ಗ್ರಾಮಸ್ಥ ಪ್ರವೀಣ್ ಶೆಣೈ ಪೂವಣಿಬೆಟ್ಟು ವ್ಯಾಪ್ತಿಯ ಜನರು ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ಬೇಸತ್ತಿದ್ದಾರೆ. ಈ ಸಮಸ್ಯೆಗಳನ್ನು ಲೈನ್‌ಮ್ಯಾನ್ ಸಿಬ್ಬಂದಿಗೆ ಕರೆ ಮಾಡಿದರೆ “ನಮ್ಮ ಅವಧಿಯು 5 ಗಂಟೆಯವರೆಗೆ ಮಾತ್ರ ಕೆಲಸದ ಅವಧಿ, ಉಳಿದ ಸಮಯದಲ್ಲಿ ಜನರ ಕರೆಗಳಿಗೆ ಸ್ಪಂದಿಸುವುದಿಲ್ಲ ಎಂದು ಮೆಸ್ಕಾಂ ಸಹಾಯಕ ನಿರ್ದೇಶಕ ಮೋಹನ್ ಟಿ. ಅವರ ಬಳಿ ಸಮಸ್ಯೆ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಮೆಸ್ಕಾಂ ಸಹಾಯಕ ನಿದರ್ಶಕ ಮೋಹನ್ ಟಿ, ರಜೆ ಇದ್ದರೂ ಇಲ್ಲದೇ ಹೋದರೂ ಲೈನ್‌ಮ್ಯಾನ್‌ಗಳು ಒಂದು ವೇಳೆ ಸಮಸ್ಯೆ ಇದ್ದ ಸ್ಥಳಕ್ಕೆ ಭೇಟಿ ನೀಡಲಾಗದೇ ಹೋದರೂ ಮೆಸ್ಕಾಂ ಕಛೇರಿಗೆ ನೇರವಾಗಿ ಕರೆ ಮಾಡಿದರೆ ತಕ್ಷಣ ಸಮಸ್ಯೆಯನ್ನು ಬಗೆಹರಿಸಿ ಕೊಡಲಾಗುವುದು ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ ಗ್ರಾ.ಪಂ ಸದಸ್ಯರುಗಳಾದ ನವೀನ್ ಪೂಜಾರಿ, ನಾಗೇಶ್ ಪೂಜಾರಿ, ಮೋಹಿನಿ, ಉಷಾ, ರಜ್ಹಾಕ್, ಜಯಶಂಕರ್, ನವ್ಯ, ಕುಶಲ ಆರ್. ಶೆಟ್ಟಿ, ಉಪಸ್ಥಿತರಿದ್ದರು
ಉಪ ತಹಶೀಲ್ದಾರ ರಾಮು, ಮೂಡುಬಿದಿರೆ ವ್ಯಾಪ್ತಿಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ದಿವಾಕರ್ ರೈ, ಲೋಕೋಪಯೋಗಿ ಇಲಾಖಾ ಸಹಾಯಕ ಇಂಜಿನಿಯರ್,ಸಹಾಯಕ ಇಂಜಿನಿಯರ್ ಸಂಜೀವ ನಾಯ್ಕ್, ವೈದ್ಯಾಧಿಕಾರಿ ಡಾ. ಶಶಿಕಲಾ, ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಅಭಿವೃದ್ಧಿ ಅಧಿಕಾರಿ ಕಾಂತಪ್ಪ, ಗ್ರಾಮಕರಣಿಕಾಧಿಕಾರಿ ಗಾಯತ್ರಿ, ಮತ್ತಿತರರು ಉಪಸ್ಥಿತರಿದ್ದಾರು.
.
0 Comments