ಮೂಡುಬಿದಿರೆ: ಅಂಚೆ ವಿಭಾಗದಿಂದ ಸನ್ಮಾನಗೊಂಡ ಎಲ್ಲಾ ಯುವ ಪ್ರತಿಭೆಗಳು ಇನ್ನಷ್ಟು ಸಾಧನೆಗೈದು ಯಶಸ್ಸನ್ನು ಕಾಣುವಂತಾಗಲಿ ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕಿ ಡಾ/ಎಂಜಲ್ ರಾಜ್ ಪ್ರತಿಭೆಗಳಿಗೆ ಶುಭಹಾರೈಸಿದರು.
ಅವರು ಪುತ್ತೂರು ಅಂಚೆ ವಿಭಾಗದ ವತಿಯಿಂದ ಮೂಡುಬಿದಿರೆಯ ಎಮ್.ಸಿ.ಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಶನಿವಾರ ನಡೆದ ಯುವ ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸನ್ಮಾನ ಕಾರ್ಯಕ್ರಮ
ಕಲಾ ಕ್ಷೇತ್ರದಲ್ಲಿ ಸಾಧನೆಗೈದಿರುವ ರೆಮೊನ ಎವಟ್ಟೆ ಪಿರೇರಾ, ತಿಲಾಕ್ ಕುಲಾಲ್ , ನಿಹಾಲ್ ತಾವ್ರೋ, ತನುಶ್ರೀ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಪದ್.ಜಿ.ಮರೋಡಿ, ವರ್ಣ ರೈ, ಎಮ್. ಮನ್ವಿತ್ ಪ್ರಭು, ರಶ್ಮಿ, ಭಾಗ್ಯಶ್ರೀ, ನಿಖಿತಾ ಅವರನ್ನು ಪುತ್ತೂರು ಅಂಚೆ ವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ್, ಕಾರ್ಕಳದ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯಕ್, ಪುತ್ತೂರು ಅಂಚೆ ಅಧೀಕ್ಷಕ ಜೋಸೆಫ್ ರೊಡ್ರಿಗ್ರಸ್, ಮೂಡುಬಿದಿರೆ ತಾಲೂಕಿನ ಅಂಚೆ ಪಾಲಕಿ ಉಷಾ ಹಾಗೂ ಪುತ್ತೂರು ಅಂಚೆ ವಿಭಾಗದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪುತ್ತೂರು ಅಂಚೆ ವಿಭಾಗದ ತರಬೇತುದಾರ ರೋಹನ್ ಲಿವಿಸ್ ನಿರೂಪಿಸಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಫೀಸರ್ ಗುರುಪ್ರಸಾದ್ ಧನ್ಯವಾದಗೈದರು.
0 Comments