ತುಳು ಸಂಸ್ಕ್ರತಿ ನಶಿಸದಂತೆ ನೋಡಿಕೊಳ್ಳಬೇಕು: ಸಾಹಿತಿ ಜಯಂತಿ ಎಸ್.ಬಂಗೇರ

ಜಾಹೀರಾತು/Advertisment
ಜಾಹೀರಾತು/Advertisment

  

ಮೂಡುಬಿದಿರೆ :  ತುಳು ಭಾಷೆ, ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು.  ನಮ್ಮ ಮಕ್ಕಳಿಗೆ ತುಳು ಸಂಸ್ಕ್ರತಿಯ ಹಬ್ಬ  ಆಚರಣೆಗಳ ಬಗ್ಗೆ ಮನೆಯಲ್ಲಿಯೇ ತಿಳಿಸಿಕೊಡುವಂತಹ ಕೆಲಸವನ್ನು ಮಾಡುವ ಮೂಲಕ ನಶಿಸಿ ಹೋಗುತ್ತಿರುವ ಸಂಸ್ಕ್ರತಿಯನ್ನು ಎತ್ತಿ ಹಿಡಿಯಬೇಕು ಎಂದು ತುಳು ಸಾಹಿತಿ, ಉಡಲ್ ತ್ರೈಮಾಸಿಕ ಪತ್ರಿಕೆಯ ಸಂಪಾದಕಿ ಜಯಂತಿ ಎಸ್.ಬಂಗೇರ ಹೇಳಿದರು.

ಅವರು ವಾಲ್ಪಾಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಡದಂಗಡಿಯಲ್ಲಿ ಭಾನುವಾರ ಆಯೋಜಿಸಲಾದ "ವಾಲ್ಪಾಡಿ ಗ್ರಾಮೋತ್ಸವ" ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳು ಸಂಸ್ಕೃತಿಯ ಮಾತನಾಡಿದರು.

 ಗ್ರಾಮದಲ್ಲಿರುವ ಮಕ್ಕಳು ಎಲ್ಲಾರೂ ಪ್ರತಿಭಾವಂತರು, ಎಲ್ಲಾ ಮಕ್ಕಳ ಪ್ರತಿಭೆಗಳನ್ನು  ಗುರುತಿಸಿ ವಿಶ್ವಮಟ್ಟದಲ್ಲಿ ಹೆಸರು ಮಾಡುವ ಮಾಡುವಂತ್ತಾಗಬೇಕು. ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಬೇಕಾದರೆ   ಗ್ರಾಮೋತ್ಸವದಂತಹ ಕಾರ್ಯಕ್ರಮಗಳು ಪೂರಕ.  ಜಾತಿ, ಧರ್ಮ ಭೇದವನ್ನು ಮರೆತು ಒಟ್ಟಾಗಿ ಸೇರಿ ನಡೆಸುವಂತಹ  ಹಬ್ಬಗಳು ಇನ್ನೂ ಮುಂದೆಯೂ ನಡೆಯಲಿ ಎಂದ ಅವರು ೨೦ ವರ್ಷಗಳ ಹಿಂದೆ ಅದೇ ವೇದಿಕೆಯಲ್ಲಿ ಅವರೇ ಬರೆದಿರುವ  ನಾಟಕವನ್ನು ಕಲ್ಪನಾ ಮಹಿಳಾ ಮಂಡಲದ ಸದಸ್ಯೆಯರು ಅಭಿನಯಿಸಿರುವ ಬಗ್ಗೆ ನೆನಪುಗಳನ್ನು ಮೆಲುಕು ಹಾಕಿದರು. 

 ಶ್ರೀ ರಾಜಂದೈವ ಮತ್ತು ಶ್ರೀ ಬೃಹ್ಮಬೈದರ್ಕಳ ಗರಡಿಯ ಅಧ್ಯಕ್ಷ ಸತೀಶ್.ವಿ. ಶೆಟ್ಟಿ ಗ್ರಾಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಆನಂದ್‌ಕುದ್ಕೋಳಿ ಅಧ್ಯಕ್ಷತೆಯನ್ನು ವಹಿಸಿದ್ದರು. 

ವಾಲ್ಪಾಡಿ  ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಂ.ಶರೀಫ್, ಕ್ರೈಸ್ತ ಮುಖಂಡ ಪ್ರವೀಣ್‌ಮೆಂಡೋನ್ಸಾ, ಶಾಲೆಯ ಮುಖ್ಯ ಶಿಕ್ಷಕಿ ವಾಣಿಶ್ರೀ, ಕಲ್ಪನಾ ಮಹಿಳಾ ಮಂಡಳಿಯ ಅಧ್ಯಕ್ಷೆ ಜೆಸಿಂತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕ, ನಮ್ಮ ಬೆದ್ರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು.  ಪ್ರಕಾಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸುಕನ್ಯಾ ಎಂ ಧನ್ಯವಾದಗೈದರು.

ಸಭಾ ಕಾರ್ಯಕ್ರಮದ ನಂತರ ಕಲ್ಲಡ್ಕ ವಿಠಲ್‌ನಾಯಕ್ ಹಾಗೂ ಅವರ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.


Post a Comment

0 Comments