ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ವಿಚಾರ-ದೂರು ನೀಡಲು ಬಂದ ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀಗಳ ಖಡಕ್ ಪ್ರತಿಕ್ರಿಯೆ

ಜಾಹೀರಾತು/Advertisment
ಜಾಹೀರಾತು/Advertisment

 

ಉಡುಪಿ: ರಾಜ್ಯದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ನೀಡಿರುವುದು ಸಹಿತವಾಗಿ ಪ್ರಸ್ತುತ ಉಂಟಾಗಿರುವ ಕಂದಕಕ್ಕೆ ಸಂಬಂಧಿಸಿ ಸಮಸ್ಯೆ ಪರಿಹಾರಗೊಳಿಸಬೇಕೆಂದು ಅಪೇಕ್ಷಿಸಿ  ಭೇಟಿಯಾಗಲು ಬಂದ ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಒಳ್ಳೆಯ ತಿಳುವಳಿಕೆಯ ಮಾತುಗಳನ್ನು ಹೇಳಿ ಕಳುಹಿಸಿದ್ದಾರೆ .

ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ .‌ಅದಕ್ಕೆ ಕಾರಣ ಯಾರು ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನಿರಂತರ ಗೋ ಸಾಗಾಟ ಗೋಹತ್ಯೆ ಯಾಕೆ ನಿಂತಿಲ್ಲ? ಜೀವನೋಪಾಯಕ್ಕೆ ಗೋವುಗಳನ್ನು ಸಾಕಿಕೊಂಡು ಬದುಕುತ್ತಿರುವವರ ಮನೆಗೆ ನುಗ್ಗಿ ಬೆದರಿಸಿ ಗೋವುಗಳನ್ನು ಮಾಡ್ತಾ ಇದ್ದೀರಿ! ಇಂತಹ ಅನೇಕ ಕಾನೂನು ಬಾಹಿರವಾದ ಕೆಲಸಗಳಿಂದ ನೊಂದಿರುವ ಹಿಂದೂ ಸಮಾಜವನ್ನು  ಬಿಟ್ಟು ಶಾಂತಿ ಸೌಹಾರ್ದದ ಮಾತುಕತೆ ಅಥವಾ ಪರಿಹಾರ ನನ್ನೊಬ್ಬನಿಂದ ಸಾಧ್ಯವಿಲ್ಲ . 

ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು?

ಸಮಾಜದಲ್ಲಿ  ಕಾನೂನು  ಶಾಂತಿ  ನೆಮ್ಮದಿಗೆ  ವಿರುದ್ಧವಾಗಿ  ನಡೆದುಕೊಳ್ಳುತ್ತಿರುವ  ರೀತಿಗಳ ಬಗ್ಗೆ ಅವಲೋಕಿಸಿ  ಮತ್ತೆ ಮಾತಾಡೋಣ ಎಂದು ಶ್ರೀಗಳು ಮುಸ್ಲಿಂ ನಿಯೋಗಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ .

Post a Comment

0 Comments