ಮೂಡುಬಿದಿರೆ: ಇಲ್ಲಿನ ಗಾಂಧಿನಗರ ನಿವಾಸಿ, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ದೈವ ನರ್ತಕ ಗಂಗಯ್ಯ ಪರವ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.
ಕಳೆದ ೬೦ ವರ್ಷಗಳಿಂದ ದೈವನರ್ತಕರಾಗಿ ಸೇವೆ ಸಲ್ಲಿಸಿದ ಅವರು, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕ ಪ್ರಶಸ್ತಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಳ್ವಾಸ್ ನುಡಿಸಿರಿ ಗೌರವ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.


0 Comments