ಮೂಡಬಿದಿರೆ: ಐತಿಹಾಸಿಕ ಸ್ಮಾರಕಗಳ ಶುಚಿತ್ವ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತುಸಂಗ್ರಹಾಲಯ ಬಿಜೈ ಮಂಗಳೂರು ಇದರ ನೇತೃತ್ವದಲ್ಲಿ, ಶ್ರೀ ಧವಲಾ ಕಾಲೇಜು ಮೂಡಬಿದಿರೆಯ ಹೇರಿಟೇಜ್ ಕ್ಲಬ್ ನ ವತಿಯಿಂದ, ಧವಲತ್ರಯ ಟ್ರಸ್ಟ್(ರಿ

ಮೂಡಬಿದಿರೆ ಇವರ ಸಹಯೋಗದೊಂದಿಗೆ  ಎರಡು ದಿನಗಳ ಸ್ಮಾರಕ ಶುಚಿತ್ವ ಕಾರ್ಯಕ್ರಮ ಮೂಡಬಿದಿರೆಯಲ್ಲಿ ಜರುಗಿತು. ಮೂಡಬಿದಿರೆಯ ಐತಿಹಾಸಿಕ ಸ್ಮಾರಕಗಳಾದ ಸಾವಿರ ಕಂಬದ ಬಸದಿ ಮತ್ತು ಗುರು ಬಸದಿಯನ್ನು ಶುಚಿಗೊಲಿಸಲಾಯಿತು. ಶ್ರೀ ಧವಲಾ ಕಾಲೇಜಿನ ಹೇರಿಟೇಜ್ ಕ್ಲಬ್ ನ 70 ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 


ಈ ಸಂದರ್ಭದಲ್ಲಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾ ಸ್ವಾಮಿಜಿ ಇತಿಹಾಸ ಪ್ರಸಿದ್ದ ಮೂಡಬಿದಿರೆಯ ಬಸದಿಗಳು ದೇಶ ವಿದೇಶದ ಸಹಸ್ರಾರು ಜೈನ - ಜೈನೇತರು ಬೇಟಿ ನೀಡುವ ಶ್ರದ್ದಾಕೇಂದ್ರ ನಮ್ಮ ಹೆಮ್ಮೆ. ಇಂತಹ ಐತಿಹಾಸಿಕ ಕೇಂದ್ರಗಳ ಸ್ವಚ್ಚತೆಯಿಂದ ಪರಿಸರ ಶುಭ್ರ ಸುಂದರವಾಗುತ್ತದೆ. ಧರ್ಮ ಸೌಹಾರ್ದತೆ ಶಾಂತಿಯ ಕೇಂದ್ರಗಳ ಸಂಪರ್ಕದಿಂದ ಮಾತ್ರ ತೃಪ್ತಿ ಶಾಂತಿ ಸಿಗದು,ನಮ್ಮೆಲ್ಲರ ಶ್ರದ್ದಾಕೇಂದ್ರಗಳನ್ನು ಶುಚಿಯಾಗಿಟ್ಟುಕೊಳ್ಳಲು ಸಹಕರಿಸುವುದು ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ಸಹಕರಿಸಿದ ಶ್ರಿ ಧವಲಾ ಕಾಲೇಜಿನ ಹೇರಿಟೇಜ್ ಕ್ಲಬ್ ನ ಎಲ್ಲಾ ಸದಸ್ಯರಿಗೆ ಸ್ವಾಮಿಜಿಯವರು ಹರಸಿ ಆಶೀರ್ವದಿಸಿದರು.

ಕಾಲೇಜಿನ ಹೇರಿಟೇಜ್ ಕ್ಲಬ್ ನ ಸಂಯೋಜಕರಾದ ಸುದೀಪ್ ಮತ್ತು  ಅರ್ಥಶಾಸ್ರ ಉಪಸ್ಯಾಸಕರಾದ ಸೂರಜ್ ರವರು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Post a Comment

0 Comments