ಜಿಲ್ಲೆಯ ಉಸ್ತುವಾರಿ ಸಚಿವರಿಂದ ನೂತನ ಕಛೇರಿ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 


ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ರಾಜ್ಯದ ಮುಖ್ಯಮಂತ್ರಿಗಳು ನೇಮಿಸಿದ್ದು ಇಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಬಳಿಯಿರುವ ತಾಲೂಕು ಆಡಳಿತ ಸೌಧದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯನ್ನು ಉದ್ಘಾಟಿಸಿದರು. ಸಹಕಾರ ಕ್ಷೇತ್ರದ ಸಾಧಕ ಹಾಗೂ ಜನ ಸಂಘದ ಹಿರಿಯರಾದ ಶ್ರೀ ರವೀಂದ್ರನಾಥ ಪವಾರ್ ರವರು ನೂತನ ಕಛೇರಿಯನ್ನು ಉದ್ಘಾಟಿಸಿದರು. ನಂತರ ಸಚಿವರು ಹಿರಿಯರಾದ ಶ್ರೀ ರವೀಂದ್ರನಾಥ ಪವಾರ್ ರವರನ್ನು ಸನ್ಮಾನಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ್, ಶ್ರೀ ಸಿದ್ಧಿ, ಶ್ರೀ ಗಣಪತಿ ಉಲ್ವೇಕರ್, ಸಂಘ ಮತ್ತು ಬಿಜೆಪಿ ಪ್ರಮುಖರಾದ ಶ್ರೀ ವೆಂಕಟೇಶ್ ನಾಯ್ಕ್, ನಿತೇಶ್ ಅಂಕೋಲ್ಕರ್ ಸಹಿತ ವಿವಿಧ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments