ಯುವ ಜನತೆಗೆ ಮಾದರಿಯಾದ ನಾಗೇಶ್ ಇರುವೈಲ್

ಜಾಹೀರಾತು/Advertisment
ಜಾಹೀರಾತು/Advertisment

ಇತ್ತೀಚಿನ ಯುವ ಜನತೆ ಉದ್ಯೋಗಕ್ಕಾಗಿ ದೂರದ ದೇಶಗಳಿಗೆ ಹೋಗಿ ಉತ್ತಮ ಸಂಪಾದನೆ ಮಾಡಬೇಕೆಂದು ಆಸಕ್ತಿ ತೋರುವವರ ನಡುವೆ   ಇಲ್ಲೊಬ್ಬ ಯುವ ಕೃಷಿಕರು ಮುಂಬಯಿಯ ಕೆಲಸವನ್ನು ಬಿಟ್ಟು ಊರಿಗೆ ಬಂದು ಅಡಿಕೆ, ತೆಂಗು, ಬಾಳೆ ಕೃಷಿಯ ಜೊತೆ ಜೊತೆಗೆ ಫಾರಂ ಕೋಳಿಗಳನ್ನು ಸಾಕಾಣಿಕೆ ಮಾಡಿ ಯಶಸ್ವಿಯಾದ  ಸ್ಟೋರಿಯನ್ನು ನೋಡ್ಕೋಂಡು ಬರೋಣ ಬನ್ನಿ

ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮದ ನಿವಾಸಿ ನಾಗೇಶ್ ಎಂಬ ಯುವಕನೋರ್ವ ಮೊದಲು ಮುಂಬಯಿಯಲ್ಲಿ  ಉದ್ಯೋಗ ಮಾಡುತ್ತಿದ್ದು,  ತದನಂತರ ಊರಿನಲ್ಲಿ ತನ್ನ ಸಹೋದರನು ಸಹ ಉದ್ಯೋಗದಲ್ಲಿರುವುದರಿಂದ ಕೃಷಿ ವಹಿವಾಟುಗಳನ್ನ ನೋಡಿಕೊಳ್ಳಲು ಯಾರಿಲ್ಲ ಎಂಬುದನ್ನು ತಿಳಿದು ಹಿಂದಿನಿAದಲೂ ನಡೆಸಿಕೊಂಡು ಬಂದಿರುವ ಕೃಷಿಯನ್ನು ಇಲ್ಲಿಗೆ ನಿಲ್ಲಿಸಬಾರದೆಂಬ ಉದ್ದೇಶದಿಂದ ಇವರು ಊರಲ್ಲಿ ಕೃಷಿಯನ್ನು ಮುಂದುವರಿಸಿಕೊ ಂಡು ಹೋಗಲು ಊರಿಗೆ ಬಂದು ನೆಲೆವೂರಿದರು. ಅಡಿಕೆ, ತೆಂಗು, ಬಾಳೆ ಕೃಷಿಯ ಜತೆಗೆ ಇರುವ ಜಾಗದಲ್ಲಿ  ಕೋಳಿ ಸಾಕಾಣಿಕೆಗೆ ಬೇಕಾದ ಪ್ರತ್ಯೇಕವಾದ ಶೇಡ್‌ನ್ನು ನಿರ್ಮಿಸಿ ಫಾರಂ ಕೋಳಿಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದರು.

೨೦೧೭ರಲ್ಲಿ ಊರಿಗೆ ಬಂದ ಇವರು ತನ್ನದೇ ಯೋಚನೆಯಲ್ಲಿ ಫಾರಂ ಕೋಳಿ ಸಾಕಾಣಿಕೆಯ ವಹಿವಾಟನ್ನು ಮಾಡಬೇಕೆಂಬ ಆಸಕ್ತಿಯನ್ನು ತೋರಿದರು. ಇದಕ್ಕೆ ಮನೆಯವರ ಸಂಪೂರ್ಣ ಬೆಂಬಲವೂ ಸಿಕ್ಕಿದ್ದು, ಇವರ ಕೆಲಸದ ಉತ್ಸಾಹಕ್ಕೆ ಪುಷ್ಠಿ ನೀಡಿದಂತಾಯಿತು. ಸ್ವಂತ ಕೋಳಿ ಸಾಕಾಣಿಕೆಯ ಪ್ರತ್ಯೇಕ ಶೇಡ್ ನಿರ್ಮಾಣಕ್ಕೆ  ಸುಮಾರು ೭ ಲಕ್ಷದಷ್ಟು ಬ್ಯಾಂಕಿನಿ ಂದ  ಲೋನ್ ಪಡೆದು ಶೇಡ್ ನಿರ್ಮಾಣ ಮಾಡಿ ಕೋಳಿಗಳಿಗೆ ಬೇಕಾಗಿರುವ ನೀರು, ಬೆಳಕಿನ ವ್ಯವಸ್ಥೆ ಹಾಗೂ ಅದಕ್ಕೆ ಬೇಕಾದ ಫುಡ್‌ನ್ನು ಹಾಕಿ  ಅಚ್ಚುಕಟ್ಟಾಗಿ ಮಾಡಿ ದಿನಾ ಅದರ ಪಾಲನೆ ಪೋಷಣೆಯನ್ನು ಮಾಡುತ್ತಾ ಬಂದಿದ್ದಾರೆ.

ಒ ಂದು ಬಾರಿ ಸುಮಾರು ೩೧೦೦ ಮರಿ ಕೋಳಿಗಳನ್ನು ಸ್ಥಳೀಯ ಕಂಪೆನಿಯಿ ಂದ ತರಿಸಿ ಅದರ ಪಾಲನೆ ಪೋಷಣೆಯನ್ನು ಮಾಡಿ ಬೆಳವಣಿಗೆಯಾದ  ೪೦ ದಿನಗಳ ನಂತರ ಕಂಪೆನಿಯ ವಾಹನಗಳು ಬಂದು ಕೋಳಿಗಳನ್ನು ಸಾಗಾಟ  ಮಾಡಿ ಬೇರೆ ಬೇರೆ ಕಡೆಗೆ ರಫ್ತು ಮಾಡುತ್ತಾರೆ. ಬೆಳವಣಿಗೆಯಾದ ಹೆಣ್ಣು ಕೋಳಿ ೨.೧/೨ ಹಾಗೂ ಗಂಡು ಕೋಳಿ ಸುಮಾರು ೩ ತೂಕದಷ್ಟು ಬೆಳವಣಿಗೆಯಾಗಿರುತ್ತದೆ. ಸರಿಸುಮಾರು  ಕೋಳಿ ಸಾಕಾಣಿಕೆಗೆ ಕಂಪೆನಿ ಕಡೆಯಿಂದ ಫುಡ್‌ನ್ನು ನೀಡಲಾದರೂ ಉಳಿದೆಲ್ಲಾ ಕೋಳಿಗಳ ಸಾಕಾಣಿಕೆಯ  ಕೆಲಸ ಕಾರ್ಯಗಳನ್ನು ಇವರೇ ನಿರ್ವಹಿಸುತ್ತಾರೆ.

 ಕೊರೋನಾ ಸಂದರ್ಭದ ಂಲ್ಲಿ ಬಂದ ಂತಹ ಎರಡು ಮೂರು ಬ್ಯಾಚ್‌ನ ಕೋಳಿಗಳನ್ನು ಕಂಪೆನಿಯೇ ಗುಂಡಿ ತೆಗೆದು ಹೂತರು. ಈ ವೇಳೆ ಸಾಕಷ್ಟು ನಷ್ಟ ಉಂಟಾಯಿತು. ಉಳಿದ  ದಿನಗಳಲ್ಲಿ ಕೋಳಿ ಸಾಕಾಣಿಕೆಯಲ್ಲಿ ನಷ್ಟ ಏನೂ ಆಗಿಲ್ಲ ಹೂಡಿದ ಬಜೆಟ್‌ಗೆ ತಕ್ಕ ಲಾಭವನ್ನು ಪಡೆಯುತ್ತಿದ್ದೆನೆ ಅದಲ್ಲದೇ ಕೋಳಿ ಸಾಕಾಣಿಕೆಯ ಗೊಬ್ಬರವನ್ನು  ತೋಟಗಳಿಗೆ ಹಾಗೂ ಉಳಿದ ಗೊಬ್ಬರವನ್ನು ಮಾರಾಟ ಮಾಡಿ ಲಾಭವನ್ನು ಪಡೆಯುತ್ತಿದ್ದೆನೆ ಇದನ್ನು ನಿಭಾಯಿಸಲು ಕಷ್ಟ ಎಂದು ಯಾವತ್ತೂ ಅನಿಸಿಲ್ಲ ಕೆಲಸಕ್ಕೆ ತಾಯಿ, ಪತ್ನಿ,ಹಾಗೂ ಸಹೋದರರು ಸಹಾಯ ಮಾಡುತ್ತಾರೆ.

 

Post a Comment

0 Comments