ಮಹಾವೀರ ಕಾಲೇಜಿನಲ್ಲಿ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ದಳ ಮಟ್ಟದ ಬೇಸಿಗೆ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡುವುದು ಅತ್ಯಗತ್ಯ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಆಗಬೇಕೆಂಬ ದೃಷ್ಟಿಯಿಂದ ಆಟೋಟ, ಸ್ಕೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್ ಮೊದಲಾದ ಹಲವಾರು ಚಟುವಟಿಕೆಗಳನ್ನು ಸರಕಾರವು ಹಮ್ಮಿಕೊಂಡಿದೆ. ತನ್ಮೂಲಕ ವಿದ್ಯಾರ್ಥಿಗಳು ಸಮಯಪ್ರಜ್ಞೆ ಹಾಗೂ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯಕುಮಾರ್ ಶೆಟ್ಟಿ ತಿಳಿಸಿದರು.

   ಅವರು ಶ್ರೀ ಮಹಾವೀರ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ದಳ ಮಟ್ಟದ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

 ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ  ಶಿಬಿರದಿಂದ ವಿದ್ಯಾರ್ಥಿಗಳಿಗೆ ಉತ್ತಮ ಪ್ರಯೋಜನ ದೊರಕಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ, ‘ಶಿಬಿರದಲ್ಲಿ ಹಮ್ಮಿಕೊಳ್ಳಲಾದ ವ್ಯಕ್ತಿತ್ವ ವಿಕಸನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆಯಬೇಕು. ಜೊತೆಗೆ ಶಿಬಿರದ ಉದ್ದೇಶವು ಈಡೇರುವಲ್ಲಿ ಶ್ರಮಿಸಬೇಕು’ ಎಂದರು.  

  ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಹಾಗೂ ಪದವಿ ಕಾಲೇಜಿನ ರೇಂಜರ್ ಲೀಡರ್ ರಶ್ಮಿತಾ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ರೇಂಜರ್ ಲೀಡರ್ ವರ್ಷಿತಾ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ವಿಜಯಲಕ್ಷಿ÷್ಮ ಮಾರ್ಲ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ೫ ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಆರೋಗ್ಯ ಸದೃಢತೆ, ಸ್ವಚ್ಛಪರಿಸರ, ಜೀವನ ಕೌಶಲ್ಯ, ಪ್ರಾವೀಣ್ಯತಾ ಪದಕ, ಶಿಬಿರ ಕೌಶಲ್ಯ, ಪ್ರಥಮ ಚಿಕಿತ್ಸೆ, ತೋಟಗಾರಿಕೆ, ಸಾಮಾನ್ಯ ಜ್ಞಾನ, ಚಾರಿತ್ರಾ÷್ಯಭಿವೃದ್ಧಿ, ಪರಿಸರ ಸಂರಕ್ಷಣೆ, ಸರ್ವಧರ್ಮ ಸಮನ್ವಯ, ಡಿಜಿಟಲ್ ಸ್ಕೌಟ್ಸ್ ಮುಂತಾದುವುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡಲಾಯಿತು.


Post a Comment

0 Comments