ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಮಾತ್ರ ನಮ್ಮ ವಿರೋಧ-ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:ಧರ್ಮದ ಸಂಸ್ಕಾರ, ಸಂಸ್ಕೃತಿ ಮತ್ತು ಕೆಟ್ಟು ಹೋದ ಮನಸ್ಸನ್ನು ಕಟ್ಟುವಂತಹ ಕೆಲಸವಾಗಬೇಕಾಗಿದೆ.  ಸಂವಿಧಾನತ್ಮಾಕವಾಗಿ ಹೋರಾಟ ಮಾಡುವ ಕಾರ್ಯಕರ್ತರೊಂದಿಗೆ ಎಂದಿಗೂ ಸಮಾಜದ ಬೆಂಬಲವಿದೆ. ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಮಾತ್ರ ನಮ್ಮ ವಿರೋಧ. ರಾಷ್ಟ್ರ ಪ್ರೇಮವನ್ನು ಇಟ್ಟುಕೊಂಡಿರುವವರಿಗೆ ಎಂದೂ ವಿರೋಧವನ್ನು ಬಯಸುವುದಿಲ್ಲ .  ಎಂದು ಎಂದು ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ  ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.

 ವಿ.ಹಿಂ.ಪ ಮೂಡುಬಿದಿರೆ ಘಟಕದ ವತಿಯಿಂದ ಮಂಗಳವಾರ ಕನ್ನಡಭವನದಲ್ಲಿ ನಡೆದ ಧರ್ಮ ರಕ್ಷಾ ನಿಧಿ ಅರ್ಪಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪ್ರತೀ ಮನೆಯನ್ನು ಧರ್ಮಶ್ರದ್ಧೆಯ ಮನೆಯನ್ನಾಗಿ ರೂಪಿಸಬೇಕು. ನಮ್ಮ ಧರ್ಮದ ಬಗ್ಗೆ ಯಾವತ್ತೂ ಅಪನಂಬಿಕೆಯನ್ನು ಬೆಳೆಸಿಕೊಳ್ಳಬಾರದು. ನೈತಿಕ ಶಿಕ್ಷಣವನ್ನು ಮಕ್ಕಳಲ್ಲಿ ಬೆಳೆಸಲು ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಬೇಕೆಂದು ತಿಳಿಸಿದರು. 

ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮಾತನಾಡಿ,ದೇಶದಲ್ಲಿ ಮೂಲಭೂತವಾದಿಗಳು ಪ್ರತ್ಯೇಕತಾವಾದವನ್ನು ಸೃಷ್ಟಿಸುತ್ತಿವೆ. ದೇಶವನ್ನು ಇಸ್ಲಾಮೀಕರಣಗೊಳಿಸಲು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ. ಇದಕ್ಕಾಗಿ ಬೇರೆಬೇರೆ ರೀತಿಯ ಹುನ್ನಾರಗಳನ್ನು ನಡೆಸುತ್ತಿದ್ದು ಹಿಜಾಬ್ ಜೆಹಾದ್ ಹೊಸ ಸೇರ್ಪಡೆಯಾಗಿದೆ ಎಂದು ಅಭಿಪ್ರಾಯಪಟ್ಟ ಅವರು 

 ಧರ್ಮಕ್ಕಾಗಿ ಹೋರಾಡಿರುವ ಹಿಂದೂ ಕಾರ್ಯಕರ್ತರ ಮನೆಗಳಿಗೆ ನಮ್ಮ ಸಮಾಜದ ಬಾಂಧವರೆಲ್ಲಾ ಸೇರಿ ಅವರ ಕುಟುಂಬಗಳಿಗೆ ನೆರವಾಗಬೇಕು. ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಧನ ಸಹಾಯವನ್ನು ನೀಡುವುದರ ಮೂಲಕ ಧರ್ಮಕ್ಕಾಗಿ ಹೋರಾಡಿದ  ಕುಟುಂಬಕ್ಕೆ ನೇರವಾಗಿ ಎಂದು ತಿಳಿಸಿದರು.

ಉದ್ಯಮಿ ಸತ್ಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. 

ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾರ‍್ಯಾಧ್ಯಕ್ಷ ಕೆ.ಶ್ಯಾಮ ಹೆಗ್ಡೆ, ಉಪಾಧ್ಯಕ್ಷ ಶಾಂತಾರಾಮ ಕುಡ್ವ, ಪ್ರಧಾನ ಕಾರ‍್ಯದರ್ಶಿ ಸುಚೇತನ್ ಜೈನ್  ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments