ಭಾರತ ಮಾತೆಯನ್ನು ತಾಯಿಯೆಂಬ ಅಕ್ಕರೆಯಿಂದ ಪೂಜಿಸುತ್ತೇವೆ-ಶಾಸಕ ಉಮಾನಾಥ್ ಕೋಟ್ಯ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ:  ವಿಶ್ವಹಿಂದು ಪರಿಷತ್ – ಬಜರಂಗದಳ ಮಾತೃಶಕ್ತಿ – ದುರ್ಗಾವಾಹಿನಿ ಇವರ ವತಿಯಿಂದ 19ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯು ಶನಿವಾರದಂದು ಮೂಡುಬಿದಿರೆ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ಅರ್ಚಕ ಶಿವಾನಂದ ಶಾಂತಿಯವರ ನೇತೃತ್ವದಲ್ಲಿ  ನಡೆಯಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಉಮಾನಾಥ ಎ. ಕೋಟ್ಯಾನ್, ಭಾರತ ಮಾತೆಯನ್ನು ತಾಯಿಯೆಂಬ ಅಕ್ಕರೆಯಿಂದ ಪೂಜಿಸುತ್ತೇವೆ. ಈ ಮಣ್ಣಿನ ಕಣ ಕಣದಲ್ಲೂ ದೇವರನ್ನು ಕಂಡಂತಹ ಭೂಮಿ ನಮ್ಮದು. ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ  ಮಾತೆಯನ್ನು ಕಾಣುವ ಪವಿತ್ರ ಪುಣ್ಯ ಭೂಮಿ ನಮ್ಮದು  ಎಂದು ತಿಳಿಸಿದರು. 

ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಧಾರ್ಮಿಕ ಉಪನ್ಯಾಸ  ನೆರವೇರಿಸಿದರು. 

ವಿ.ಹಿಂ.ಪ. ಮಂಗಳೂರು ವಿಭಾಗದ ಸಹ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಸಂಘಚಾಲಕ ವಿವೇಕಾನಂದ ಕಾಮತ್, ಮಾತ್ರಶಕ್ತಿ ಪ್ರಮುಖ್ ನ ಗೀತಾ, ಬಜರಂಗದಳ ಸಂಯೋಜಕ ಅಭಿಲಾಷ್ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments