ಮೂಡುಬಿದಿರೆ: ಕೋಟಿ - ಚೆನ್ನಯರ ಧಾರು ಬಿಂಬದ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮಾರ್ನಾಡು ಶ್ರೀ ಕ್ಷೇತ್ರ ಹೈೂಪಾಲಬೆಟ್ಟ, ಶ್ರೀ ಧರ್ಮರಸು, ಶ್ರೀ ಕುಂಭಕಂಠಿಣಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ದೈವಗಳ ಬ್ರಹ್ಮ ಕಲಶೋತ್ಸವ ಹಾಗೂ ಕೋಟಿ ಚೆನ್ನಯರ ಮೂರ್ತಿ ಪ್ರತಿಷ್ಠೆ ಹಾಗೂ ವಾರ್ಷಿಕ ನೇಮೋತ್ಸವದ ಅಂಗವಾಗಿ ಅಶ್ವತ್ಥಪುರದಿಂದ ಸ್ವರಾಜ ಮೈದಾನದ ಮಾರಿ ಗುಡಿ ದೇವಾಲಯದ ಮೂಲಕ ಮಾರ್ನಾಡು ಹೈೂಪಾಲಬೆಟ್ಟದವರೆಗೆ ಕೋಟಿ-ಚೆನ್ನಯರ ಧಾರು ಬಿಂಬದ ವಿಜೃಂಭಣೆಯ ಮೆರವಣಿಗೆಗೆ    ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಬೆಳಿಯಾರ ಗುತ್ತು ರಾಜೇಶ್ ಬಳ್ಳಾಲ್, ಸದಸ್ಯ ರಾಜೇಶ್ ನಾಯ್ಕ್, ಸ್ಥಾಯಿ ಸಮಿತಿ ಸದಸ್ಯ ನಾಗರಾಜ ಪೂಜಾರಿ, ಮಾಜಿ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಸುವರ್ಣ, ವೇದ ಮೂರ್ತಿ ಅನಂತಾ ಪದ್ಮನಾಭ,  ಶರತ್ ಸುವರ್ಣ, ಚಂದ್ರಹಾಸ ಸನೀಲ್, ಸುಚರಿತ ಶೆಟ್ಟಿ, ಭಾಸ್ಕರ ಕೋಟ್ಯಾನ್, ಬೃಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Post a Comment

0 Comments