ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ತ್ರಿಸದಸ್ಯ ಪೀಠ ಮಹತ್ವದ ತೀರ್ಪು


ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮವಾಗಿ ವಿಶ್ವದೆಲ್ಲೆಡೆ ಚರ್ಚೆಗೆ ಒಳಪಡಿಸಿತ್ತು.‌ ಹಿಜಾಬ್ ಧರಿಸುವ‌ ಅವಕಾಶವನ್ನು ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಈ ಎಲ್ಲಾ ಚರ್ಚೆಗೆ ಮಂಗಳವಾರದಂದು ನೀಡಿದ ಹೈಕೋರ್ಟ್ ತೀರ್ಪು ಪೂರ್ಣವಿರಾಮ ಇಟ್ಟಿದೆ.

ಈ ಕುರಿತು ಕರ್ನಾಟಕ ಹೈಕೋರ್ಟ್‌ ನ ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌, ನ್ಯಾಯಮೂರ್ತಿ ಎಸ್‌ ಕೃಷ್ಣ ದೀಕ್ಷಿತ್ ರವರ ತ್ರಿಸದಸ್ಯ ಪೀಠ ಹಿಜಾಬ್ ಕುರಿತ ಅಂತಿಮ ತೀರ್ಪು ಪ್ರಕಟಿಸಿದೆ.

ಸಮವಸ್ತ್ರದ ಕುರಿತು ಸರ್ಕಾರ ಏನು ಆದೇಶ ನೀಡಿತ್ತೋ ಅದು ಸರಿಯಾಗಿದೆ ಎಂದು ಹೇಳಿದ ಹೈಕೋರ್ಟ್ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ತ್ರಿಸದಸ್ಯ ಪೀಠ ಮಹತ್ವದ ತೀರ್ಪನ್ನು ಹೊರಡಿಸಿದೆ. 

ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಅದನ್ನು ಪಾಲಿಸಬೇಕು. ಈ ಬಗ್ಗೆ ಸರ್ಕಾರವು ಶಾಲಾ, ಕಾಲೇಜುಗಳ ಸಮವಸ್ತ್ರದ ಕುರಿತ ವಸ್ತ್ರ ಸಂಹಿತೆ ಯಾವ ನಿಯಮ ಜಾರಿಗೆ ತಂದಿದೆಯೋ, ಸಮವಸ್ತ್ರದ ಪಾಲನೆ ಬಗ್ಗೆ ಏನು ಹೇಳಿದೆಯೋ ಅದನ್ನು ಪಾಲಿನೆ ಮಾಡಬೇಕು ಎಂದು ಹೈಕೋರ್ಟ್ ನಿರ್ಣಯ ನೀಡಿದೆ.

ಹೈಕೋರ್ಟ್ ತೀರ್ಪಿನ ಬಗ್ಗೆ ಮನವಿ ಸಲ್ಲಿಸಿದ ಬಿಜೆಪಿ: 

ಹೈಕೋರ್ಟ್ ತೀಪುನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಜನತೆ ಮತ್ತು ಕಾರ್ಯಕರ್ತರಲ್ಲಿ ಮನವಿಯನ್ನು ಮಾಡಿದ್ದು, ಹಿಜಾಬ್ ತೀರ್ಪು ಕುರಿತಾಗಿ ವಿಜಯೋತ್ಸವ, ಸಂಭ್ರಮಾಚರಣೆ ಇದರೊಂದು ಪ್ರತಿಕ್ರಿಯಾತ್ಮಕ ಹೇಳಿಕೆಯನ್ನು ನೀಡಬೇಡಿ ಎಂದು ಕೋರಿದೆ.

https://twitter.com/udayavani_web/status/1503618275523006464?t=6CwwR71XESmHxoODl0ucqQ&s=09

Post a Comment

0 Comments