ಮೂಡುಬಿದಿರೆ: ಇಂಧನ ಸಚಿವ ವಿ. ಸುನೀಲ್ ಕುಮಾರ್, ಕಂದಾಯ ದಾಖಲೆಗಳ ವಿನೂತನ ಯೋಜನೆಯನ್ನು ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಭೂಮಿಯ ದಾಖಲೆಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರದ ಕ್ರಾಂತಿಕಾರಿ ಯೋಜನೆಯಾಗಿದೆ. ರೈತರಿಗೆ ಸಂಬಂಧಿಸಿದ ಆರ್.ಟಿ.ಸಿ ಮತ್ತು ಇನ್ನಿತರ ಸೇವೆಗಳನ್ನು ಜನರ ಬಳಿ ತಲುಪಿಸುವಲ್ಲಿ ಸರಕಾರ ಶ್ರಮಿಸುತ್ತಿದೆ. ಮುಂಚೆ ಯೋಜನೆಗಳು ಬೇಕಿದ್ದಲ್ಲಿ ತಾಲೂಕುಗಳಿಗೆ ಅಲೆದಾಡಬೇಕಿತ್ತು. ಆದರೆ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಮನೆ ಬಾಗಿಲಿಗೆ ಎಂಬ ಯೋಜನೆ ಬಂದಿದೆ. ಜಿಲ್ಲಾ ಮಟ್ಟದ ಯೋಜನೆಯನ್ನು ಮೂಡುಬಿದಿರೆಯಲ್ಲಿ ಆರಂಭಿಸಲಾಗಿದೆ. ಹಾಗಾಗಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಅವರು ಪಡುಮಾರ್ನಾಡು ಗ್ರಾಮದ ಬ್ರಹ್ಮಶ್ರೀ ಮುಗೇರಕಳ ದೈವಸ್ಥಾನದ ಬಳಿ ಶನಿವಾರದಂದು ನಡೆದ ರೈತರಿಗೆ ಪಹಣಿ, ಜಮೀನಿನ ನಕ್ಷೆ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ರೈತರಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ 'ಕಂದಾಯ ದಾಖಲೆ ಮನೆ ಬಾಗಿಲಿಗೆ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಮಾತನಾಡಿ, ಸರ್ಕಾರಿಯ ಕೆಲಸವನ್ನು ಭೂ ಕಂದಾಯ ಅಧಿನಿಯಮದ ಪ್ರಕಾರ ಪ್ರತಿಯೊಬ್ಬ ಪಹಣಿದಾರನಿಗೂ ದಾಖಲೆಯ ಸೂಕ್ತ ಮಾಹಿತಿ ನೀಡುವುದು ಅಗತ್ಯ. ಹಾಗೆಯೇ ಒಂದು ವಾರಗಳ ಕಾಲ ಉಚಿತವಾಗಿ ನೀಡಲಾಗುವ ದಾಖಲೆ ಪ್ರತಿಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ಕೆಲವು ವರ್ಷಗಳಿಂದ ಕಡತಗಳು ಬಾಕಿ ಇದ್ದು, ಅವುಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಇಂದು ಚಾಲನೆ ನೀಡಲಾಗಿದೆ. ಸರಕಾರ ಅನುಷ್ಟಾನಗೊಳಿಸುವ ಯಾವುದೇ ಯೋಜನೆಗಳು ಪೂರ್ಣಗೊಳ್ಳಬೇಕಾದರೆ ಕೇವಲ ಜನಪ್ರತಿನಿಧಿಗಳು ಮಾತ್ರವಲ್ಲ ಗ್ರಾಮಲೆಕ್ಕಿಗರು,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧ್ಯಕ್ಷರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಪಂ. ಗ್ರಾ. ಪಂ. ಅಧ್ಯಕ್ಷ ಕಲ್ಯಾಣಿ,ಮದನ್ ಮೋಹನ್ ಸಹಾಯಕ ಆಯುಕ್ತ,ಸಿ.ಇ.ಒ ಡಾ. ಕುಮಾರ್,ತಹಶಿಲ್ದಾರ ಪುಟ್ಟರಾಜು,ತಾ.ಪಂ. ಕಾರ್ಯನಿರ್ವಹನಾಧಿಕಾರಿ ದಯಾವತಿ, ಕೆ.ಸಿ., ಉಪಾಧ್ಯಕ್ಷ ಅಭಿನಂದನ್ ಬಳ್ಳಾಲ್, ಪಿಡಿಒ ಭೀಮನಾಯಕ್, ದಿಲೀಪ್ ರೋಡ್ಕರ್, ಎಸ್.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.


0 Comments