ಭಾ.ಜ.ಪಾ ಟ್ರೋಫಿ-2022 ಗೆ ಚಾಲನೆ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ಕ್ರೀಡೆಯಲ್ಲಿ ಯಾವುದೇ ಜಾತಿ, ಧರ್ಮ ಪಕ್ಷವನ್ನು ತೋರುವುದಿಲ್ಲ. ಎಲ್ಲರನ್ನೂ ಒಳಗೊಂಡಂತಹ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು,  ಈ ಆಟದಲ್ಲಿ ಸಂಘಟನಾತ್ಮಾಕವಾದಂತಹ ಶಕ್ತಿಯಿದೆ. ಈ ಕ್ರೀಡೆಯನ್ನು ಯಾವುದೇ ರೀತಿಯಲ್ಲಿ ವೈಯಕ್ತಿಕ ವರ್ಚಸ್ಸಿಗೆ ತೆಗೆದುಕೊಳ್ಳದೇ ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ ಎಂದು ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಅವರು ಸ್ವರಾಜ ಮೈದಾನದಲ್ಲಿ ಆಯೋಜಿಸಲಾದ ಎರಡು ದಿನಗಳ ಭಾ.ಜ.ಪಾ ಟ್ರೋಫಿ 2022ರ ಕ್ರಿಕೆಟ್ ಪಂದ್ಯಾಟವನ್ನು  ಉದ್ಘಾಟಿಸಿ, ಸಾಂಕೇತಿಕವಾಗಿ ಬ್ಯಾಟ್ ಬೀಸುವ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು.

ಮುಲ್ಕಿ ನಗರ ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸದಸ್ಯರಾದ ರಾಜೇಶ್ ನಾಯ್ಕ್, ಸ್ಥಾಯಿ ಸಮಿತಿಯ ಅಧ್ಯಕ್ಷ ನಾಗರಾಜ ಪೂಜಾರಿ, ಇರುವೈಲು ಗ್ರಾ.ಪಂ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ಯೋಜನಾಧಿಕಾರದ ಅಧ್ಯಕ್ಷ ಮೇಘನಾಥ ಶೆಟ್ಟಿ, ಸದಸ್ಯ ಲಕ್ಷ್ಮಣ್ ಪೂಜಾರಿ, ಪುತ್ತಿಗೆ ಮಂಡಲಾಧ್ಯಕ್ಷ ಸುನೀಲ್‌ ಆಳ್ವ, ಉಪಾಧ್ಯಕ್ಷ ಅಜಯ್‌ ರೈ, ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಉದ್ಯಮಿ ಪೂವಪ್ಪ ಕುಂದರ್, ಯುವ ಮೋರ್ಚ ಅಧ್ಯಕ್ಷ ಅಶ್ವಥ್ ಪಣಪಿಲ, ಎಸ್.ಟಿ ಯುವಮೋರ್ಚದ ಸದಸ್ಯ ಪ್ರಕಾಶ್ ನಾಯ್ಕ್, ನಗರ ಪ್ರಧಾನ ಕಾರ್ಯದರ್ಶಿ ಸಾತ್ವಿಕ್‌‌ ಮಲ್ಯ,   ಮೂಲ್ಕಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ಸುನೀಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಪ್ರಭಾಕರ್ ಕುಲಾಲ್‌ ಸ್ವಾಗತಿಸಿದರೆ, ಶ್ರೀನಿಥ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments