ಮೂಡುಬಿದಿರೆ ಕಾಂಕ್ರೀಟ್ ರಸ್ತೆ- ಸೇತುವೆ ಲೋಕಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ರಸ್ತೆ ಕಾಂಕ್ರೀಟಿಕರಣ, ಚರಂಡಿ ನಿರ್ಮಾಣದ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮವು ಗುರುವಾರದಂದು ನಡೆಯಿತು.ಮೂ

ಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಸಂಕ ಕಿರು ಸೇತುವೆ, ಕೃಷ್ಣ ಕಟ್ಟೆ ಬಳಿಯ ರಸ್ತೆ ಕಾಂಕ್ರೀಟಿಕರಣ ಮತ್ತು ಚರಂಡಿ ನಿರ್ಮಾಣ, ಸ್ವರಾಜ್ಯ ಮೈದಾನದ ರಿಂಗ್‌ ರೋಡ್‌ನಿಂದ ನಾರಾಯಣ ಗುರು ಸಭಾಭವನದವರೆಗಿನ ಕಾಂಕ್ರೀಟ್‌ ರಸ್ತೆಯು ಇಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್‌ ರಿಬ್ಬನ್‌ ಕತ್ತರಿಸಿ, ಶಿಲಾನ್ಯಾಸ ಬಿಡುಗಡೆಗೊಳಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಉಮನಾಥ್ ಕೋಟ್ಯಾನ್  ಸುಮಾರು 10 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಮೂಡುಬಿದಿರೆ ಪುರಸಭೆ ವ್ಯವಸ್ಥಿತ‌ ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವುದು ಖುಷಿಯ ವಿಚಾರವಾಗಿದೆ. ಈಗಾಗಲೇ ಸುಮಾರು ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ೧೫೦೦ ಕೋಟಿಗಿಂತಲೂ ಅಧಿಕ ವೆಚ್ಚದ ಕಾಮಗಾರಿಯ ಕಾರ್ಯವು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 19.43 ಲಕ್ಷ ಮೊತ್ತದ ಕಲ್ಸಂಕದ ಕಿರು ಸೇತುವೆ, 15ನೇ ಹಣಕಾಸು ಮತ್ತು ಪುರಸಭಾ ನಿಧಿ ಒಟ್ಟುಮೊತ್ತ 21.00ಲಕ್ಷ ವೆಚ್ಚದಲ್ಲಿ ವಿಜಯ ನಗರ ಮಸೀದಿಯಿಂದ ಕೃಷ್ಣ ಕಟ್ಟೆಯವರೆಗೆ ರಸ್ತೆ ಕಾಂಕ್ರಿಟೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಹಾಗೂ 15ನೇ ಹಣಕಾಸು ಮತ್ತು ಪುರಸಭಾ ನಿಧಿ ಒಟ್ಟುಮೊತ್ತ 21.00ಲಕ್ಷ ವೆಚ್ಚದ ಸ್ವರಾಜ್ಯ ಮೈದಾನದ ರಿಂಗ್ ರೋಡ್ ನಿಂದ ಬಿಲ್ಲವ ಸಂಘವ ವರೆಗೆ ಹಾಗೂ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 9 ಮತ್ತು 12ನೇ ವಾರ್ಡಿಗೆ ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಸಂಗ್ರಹಿಸುವ ವಿಧಾನದ ವಾಹನವನ್ನು  ಉದ್ಘಾಟಿಸಿ ಮಾತನಾಡಿದರು.

ಶ್ರೀ ಚಾರುಕೀರ್ತೀ ಭಟ್ಟಾರಕ  ಸ್ವಾಮಿಜಿ ಮಾತನಾಡಿ, ಜೈನ ಮಟ್ಟದ ಶ್ರೀ ಚಾರುಕೀರ್ತೀ ಭಟ್ಟಾರಕ  ಸ್ವಾಮಿಜಿ ಮಾತನಾಡಿ ಮೂಡುಬಿದಿರೆಯ ಅಭಿವೃದ್ಧಿಯ ಜೊತೆಗೆ ಇಲ್ಲಿನ ಜೈನ ಬಸದಿಯ ಸುತ್ತ ಇರುವ ಕೋಟೆಗಳು ಅಭಿವೃದ್ದಿಯಾಗಬೇಕಾಗಿದೆ. ಕೋಟೆಗೆ ಹತ್ತಿರದಲ್ಲಿ ಅಜೀರ್ಣವಾಸ್ಥೆಯಲ್ಲಿದ್ದ ರಾ. ಹೆದ್ದಾರಿಯ ಕಲ್ಸಂಕ ಸೇತುವೆ ಇದೀಗ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಸಂತೋಷದ ವಿಚಾರವಾಗಿದೆ. ಅಲ್ಲದೇ ಇದರ ಜೊತೆಗೆ ಪಕ್ಕದಲ್ಲಿರುವ ರಾಜಕಾಲುವೆಗಳಲ್ಲಿ ಮಣ್ಣು ತುಂಬಿದ್ದು ಹೂಳೆತ್ತುವ ಕಾರ್ಯ ಆಗಬೇಕಾಗಿದೆ ಹಾಗೂ ಕೋಟೆಗೆ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ಸುರೇಶ್‌ ಕೋಟ್ಯಾನ್‌, ಪಿ.ಕೆ ಥೋಮಸ್‌, ಶ್ವೇತಾ ಕುಮಾರಿ, ಸೌಮ್ಯ ಶೆಟ್ಟಿ, ಜಯಶ್ರೀ, ಸ್ವಾತಿ ಪ್ರಭು, ರಾಜೇಶ್ ನಾಯ್ಕ್ ,  ಮತ್ತು  ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷ ಕೆ ಕೃಷ್ಣರಾಜ್‌ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್.ಎಂ, ಜಿ.ಪಂ ಮಾಜಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ಕಾರ್ಯಾಲಯ ಕಾರ್ಯಾದರ್ಶಿ ಸುಕೇಶ್‌ ಶೆಟ್ಟಿ, ಎಮ್‌.ಸಿ.ಎಸ್ ಬ್ಯಾಂಕ್‌ ಅಧ್ಯಕ್ಷ ಬಾಹುಬಲಿ ಪ್ರಸಾದ್‌, ರೈಲ್ವೆ ಸಲಹಾ ಸಮಿತಿ ಸದಸ್ಯ ಕೆ.ಪಿ ಜಗದೀಶ್‌ ಅಧಿಕಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ,  ಇಂಜಿನಿಯರ್ ಪದ್ಮನಾಭ ಗಾಣಿಗ, ಕಂದಾಯ ನಿರೀಕ್ಷಕ ದೀಲಿಪ್‌ ರೋಡ್ಕರ್‌ , ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ ರಾಜು ಪೂಜಾರಿ ಹಾಗೂ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

 ಕೊರೊನಾ ಸಂದರ್ಭದಲ್ಲಿ ಗತಿಸಿದ ಕುಟುಂಬದ ಪರವಾಗಿ ಲಕ್ಷೀ ಅವರಿಗೆ ತಲಾ ರೂ.1ಲಕ್ಷ ಚೆಕ್ ಅನ್ನು ಹಸ್ತಾಂತರಿಸಲಾಯಿತು.

Post a Comment

0 Comments