ಮೂಡುಬಿದಿರೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2021-22ನೇ ಸಾಲಿನ ರೂ 50ಲಕ್ಷ ವೆಚ್ಚದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಿರ್ಮಾಣಗೊಳ್ಳಲಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ಬೆಳಿಗ್ಗೆ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು ಇಲ್ಲಿನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಲು ಕ್ರೀಡೆಗಳು ಉತ್ತಮವಾಗಿ ಸಹಕರಿಸುತ್ತವೆ. ಇಲ್ಲಿನ ಕ್ರೀಡಾಪಟುಗಳು ದೂರದ ಊರುಗಳಿಗೆ ಹೋಗಿ ಆಡುವುದಕ್ಕಿಂತ ಇಲ್ಲಿಯೆ ಆಡಲು ಅನುಕೂಲವಾಗುವಂತೆ ಮೂಡುಬಿದಿರೆಯಲ್ಲಿ ಶಟ್ಲ್ ಕೋರ್ಟ್ ಮತ್ತು ಜಿಮ್ ಮಾಡಬೇಕೆಂಬುದು ಕನಸಿತ್ತು ಅದಕ್ಕಾಗಿಯೇ ಬಜ್ಪೆಯಿಂದ ಇಲ್ಲಿಗೆ ವರ್ಗಾಯಿಸಲಾಗಿದೆ ಎಂದ ಅವರು ಸ್ವರಾಜ್ಯ ಮೈದಾನದಲ್ಲಿ ಕ್ರೀಡೆಗೆ ಪೂರಕವಾಗುವಂತೆ ಈಗಾಗಲೇ ಬೇಕಾಗಿರುವ ವ್ಯವಸ್ಥೆಯನ್ನು ಆಳ್ವಾಸ್ ಸಂಸ್ಥೆಯ ಮೋಹನ ಆಳ್ವರು ಮಾಡಿಕೊಂಡಿದ್ದಾರೆ. ಇದೀಗ ಈ ಕ್ರೀಡಾಂಗಣವೂ ಸೇರ್ಪಡೆಗೊಂಡಿರುವುದರಿಂದ ಕ್ರೀಡಾಪಟುಗಳಿಗೆ ಸಹಕಾರವಾಗಲಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರದೀಪ್ ಡಿಸೋಜಾ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ರಾಜೇಶ್ ನಾಯ್ಕ್, ಸೌಮ್ಯ ಶೆಟ್ಟಿ, ಪಾಲಡ್ಕ ಗ್ರಾ.ಪಂ.ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಮೂಡಾ ಸದಸ್ಯ ಲಕ್ಷö್ಮಣ್ ಪೂಜಾರಿ, ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಶೀನ ಮಾಸ್ತಿಕಟ್ಟೆ, ರೈಲ್ವೇ ಸಲಹಾ ಸಮಿತಿ ಸದಸ್ಯ ಕೆ.ಪಿ.ಜಗದೀಶ ಅಧಿಕಾರಿ, ಮುಖಂಡರಾದ ದಯಾನಂದ ಪೈ, ಪುತ್ತಿಗೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಸಾತ್ವಿಕ್ ಮಲ್ಯ, ನೆಲ್ಲಿಕಾರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ಕಾಯ್ಕಿಣಿ ಉಪಸ್ಥಿತರಿದ್ದರು.


0 Comments