ಮೂಡುಬಿದಿರೆ: ಪುಚ್ಚಮೊಗರು ಶಾಂತಿರಾಜ ಕಾಲೋನಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಸಮಾರಂಭವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಾರ್ಚ್ 26ರಂದು ಜರುಗಲಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಝೊಬಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಹಶಿಕ್ಷಕ ಗಿರೀಶ್ ಸಮಾರಂಭದ ಬಗ್ಗೆ ವಿವರಿಸಿ, ಬೆಳಗ್ಗೆ 9 ಗಂಟೆಗೆ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಅಲಂಗಾರುಗುತ್ತು ಧ್ವಜಾರೋಹಣಗೈಯಲಿರುವರು. ಹೊಸಬೆಟ್ಟು ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ, ಸದಸ್ಯ ಚಂದ್ರಹಾಸ ಸನಿಲ್, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಮಂಗಳೂರು ಎಪಿಎಂಸಿ ಸದಸ್ಯ ಶ್ರೀವಾಸ ಪಾಳ್ಯ, ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಸಹಿತ ಗಣ್ಯರು ಉಪಸ್ಥಿತರಿರುವರು. ಬೆಳಗ್ಗೆ 10 ಗಂಟೆಗೆ ಶಾಸಕ ಉಮಾನಾಥ ಕೋಟ್ಯಾನ್ ರಂಗವೇದಿಕೆಯನ್ನು ಲೋಕಾರ್ಪಣೆಗೊಳಿಸಿ, ಸಮಾರಂಭವನ್ನು ಉದ್ಘಾಟಿಸಲಿರುವರು. ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಝೂಬಿ, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಪುಚ್ಚಮೊಗರು ಮಸೀದಿಯ ಧರ್ಮಗುರು ಮಹಮ್ಮದ್ ರಫೀಕ್ ಮದನಿ, ತಾಕೋಡೆ ಚರ್ಚ್ ಧರ್ಮಗುರು ನವೀನ್ ಪ್ರಕಾಶ್ ಡಿಸೋಜ ಸಭಾಧ್ಯಕ್ಷತೆಯನ್ನು ವಹಿಸಲಿರುವರು. ಯೆನಪೋಯ ಗ್ರೂಪ್‌ನ ಅಧ್ಯಕ್ಷ ಯೆನಪೋಯ ಅಬ್ದುಲ್ ಕುಂಞ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಶೈಕ್ಷಣಿಕ ಚಿಂತನೆ ಕುರಿತು ಮಾತನಾಡಲಿರುವರು. ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ರಮಾನಾಥ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು ಸಹಿತ ಗಣ್ಯರು ಉಪಸ್ಥಿತರಿರುವರು. ಅಕ್ಷರ ಸಂತ ಹರೇಕಳ ಹಾಜಬ್ಬ, ಸಾಹಿತಿ ಉಗ್ಗಪ್ಪ ಪೂಜಾರಿ, ಗಾಯಕ ನಿಹಾಲ್ ತಾವ್ರೊ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಪ್ರಗತಿಪರ ಕೃಷಿಕ ಶ್ಯಾಮ್ ಭಟ್, ಹಳೆ ವಿದ್ಯಾರ್ಥಿ ರಾಜಾಕೃಷ್ಣ ಭಟ್, ರಾಷ್ಟçಮಟ್ಟದ ಕ್ರೀಡಾಪಟು ರಮ್ಯಶ್ರೀ ಜೈನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಮಧ್ಯಾಹ್ನ 1ಗಂಟೆಯಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 3ಗಂಟೆಯಿಂದ ಕುದ್ರೋಳಿ ಗಣೇಶ್ ಬಳಗದಿಂದ `ಮಸ್ತ್ ಮ್ಯಾಜಿಕ್' ಜಾದೂ ಪ್ರದರ್ಶನ ನಡೆಯಲಿದೆ ಎಂದರು ತಿಳಿಸಿದರು.
ರಜತಮಹೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ಉಗ್ಗಪ್ಪ ಪೂಜಾರಿ, ಉಪಾಧ್ಯಕ್ಷ ಹನೀಫ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments