ಫೆ.೨೮ ಬನ್ನಂಜೆ ನುಡಿನಮನ, ಮಹಾಭಾರತ ಪಾತ್ರನುಸಂಧಾನ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ: 
ನಾಡಿನ ಹಿರಿಯ ಪ್ರವಚನಕಾರ ಹಾಗೂ ಪತ್ರಕರ್ತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಆಧಾರಿತ ಶಿಕಾರಿಪುರ ಈಶ್ವರ ಭಟ್ ರಚಿಸಿದ ಪುಸ್ತಕ `ಮಹಾಭಾರತ ಪಾತ್ರಾನುಸಂಧಾನ' ಮತ್ತು ಬನ್ನಂಜೆ ನುಡಿನಮನ ಕಾರ್ಯಕ್ರಮ ಫೆ.೨೮ರಂದು ಸೋಮವಾರ ಸಂಜೆ ಗಂಟೆ ೫ಕ್ಕೆ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಲೇಖಕ, ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಹೇಳಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲಂಗಾರು ದೇವಳದ ಆಡಳಿತ ಮೊಕ್ತೇಸರ ಈಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಅಂಕಣಕಾರ ದು.ಗು. ಲಕ್ಷಣ್ ಅವರು ಬನ್ನಂಜೆ ಅವರಿಗೆ ನುಡಿನಮನ ಸಲ್ಲಿಸಲ್ಲಿದ್ದಾರೆ. ಅಖಿಲಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಮತ್ತು ಬನ್ನಂಜೆ ಪುತ್ರ ವಿನಯ ಭೂಷಣ ಬನ್ನಂಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

ಅಲಂಗಾರು ಮಹಾಲಿಂಗೆಶ್ವರ ದೇವಸ್ಥಾನ, ಅಖಿಲ ಭಾರತ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಸಮಿತಿ ಮತ್ತು ಶ್ರೀ ನಂದಿಕೇಶ್ವರ ಪ್ರಕಾಶನ ಕೊಡಂಗಲ್ಲು ಇವುಗಳ ಸಂಯಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು. 


Post a Comment

0 Comments