ಜ್ಯೋತಿನಗರ ಕ್ಲಸ್ಟರ್ ಮಟ್ಟದ ಶಾಲಾಭಿವೃದ್ಧಿ ಸಮಿತಿ ತರಬೇತಿ

ಜಾಹೀರಾತು/Advertisment
ಜಾಹೀರಾತು/Advertisment


 ಮೂಡುಬಿದಿರೆ: ಜ್ಯೋತಿನಗರ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುವ ಹತ್ತು ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಒಟ್ಟು ೩೦ ಸದಸ್ಯರಿಗೆ ತರಬೇತಿ ಕಾರ್ಯಾಗಾರ ಜ್ಯೋತಿನಗರ ಶಾಲೆಯಲ್ಲಿ ಜರಗಿತು.

 ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಸನ್ನ ವಿ. ಶೆಣೈ ಅವರು ರಾಷ್ಟಿಯ ಶಿಕ್ಷಣ ನೀತಿಯ ಬಗ್ಗೆ ಮಾಹಿತಿ ನೀಡಿದರು. ಎಲ್ಲ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶಾಲೆಗಳಲ್ಲಿ ಕೈಗೊಂಡ ನಿರ್ಣಯ ಮತ್ತು ಯಶೋಗಾಥೆಯನ್ನು ಪ್ರಸ್ತುತಪಡಿಸಿದರು.

ಮೂಡುಬಿದಿರೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗಳಾದ ದಿವಾಕರ ರೈ ಮತ್ತು ಸಿದ್ದಪ್ಪ ಅವರು ಅಪರಾಧ ತಡೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿ '೧೧೨' ಸಂಖ್ಯೆಯನ್ನು ಬಳಸುವ ಬಗ್ಗೆ ತಿಳಿಸಿದರು

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಭಾಗವಹಿಸಿ ಪುರಸಭೆಯಿಂದ ಸರಕಾರಿ ಶಾಲೆಗಳಿಗೆ ಆದಷ್ಷು ಸಹಕಾರ ನೀಡುವ ಭರವಸೆ ನೀಡಿದರು.

ಆಟದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನವೀನ್ ಅಂಬೂರಿ ಬಹುಮಾನ ವಿತರಿಸಿದರು. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಉಷಾ ಮತ್ತು ಶಿಕ್ಷಣ ಸಂಯೋಜಕಿ ಸ್ಮಿತಾ ಮಿರಾಂದ ಭಾಗವಹಿಸಿದ್ದರು.

ಜ್ಯೋತಿನಗರ ಶಾಲೆಯ ಮುಖ್ಯಶಿಕ್ಷಕಿ ಹೇಮಲತಾ ಸ್ವಾಗತಿಸಿದರು ಸಿಆರ್‌ಪಿ ಪ್ರಸನ್ನ ವಿ.ಶೆಣೈ ನಿರೂಪಿಸಿದರು.


Post a Comment

0 Comments