ಮಹಿಳೆಯರು ಸಬಲರಾಗಬೇಕೆಂದು ಸರ್ಕಾರ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ: ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್

ಜಾಹೀರಾತು/Advertisment
ಜಾಹೀರಾತು/Advertisment

ಮೂಡಬಿದಿರೆ:“ ಸಾಲ-ಸೌಲಭ್ಯ ಹಾಗೂ ಹತ್ತು ಸಾವಿರದ ಸುತ್ತು ನಿಧಿಯ ಯೋಜನೆಯ      ಸದ್ಭಾಳಕೆಯನ್ನು ಮಾಡಿಕೊಳ್ಳಿ ನೀವು ಸಾಲವನ್ನು ಪಡೆದು ನಿಮ್ಮ ವೃತ್ತಿಯನ್ನು ಉತ್ತಮ ರೀತಿಯಲ್ಲಿ ನರ‍್ವಹಿಸಿಕೊಂಡು, ಸುತ್ತು ನಿಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಪುರಸಭೆಯ ಅಧ್ಯಕ್ಷ ಪ್ರಸಾದ್ ಕುಮಾರ್ ತಿಳಿಸಿದರು.
ಅವರು ಮೂಡಬಿದರೆ ಸಮಾಜ ಮಂದಿರದಲ್ಲಿ ನಡೆದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲಾ ಕೌಶಲ್ಯಾ ಭಿವೃದ್ಧಿ ಕಛೇರಿ ,ಜಿಲ್ಲಾ ಕೌಶಲ್ಯಾ ಮಿಶನ್ ಮಂಗಳೂರು ಹಾಗೂ ಮೂಡಬಿದಿರೆ ಪುರಸಭೆ ಸಹಯೋಗದಲ್ಲಿ ಡೇ ನಲ್ಮ್ ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟಯ ನಗರ ಜೀವನೋಪಾಯ ಅಭಿಯಾನದ ಸಾರ‍್ಥ್ಯ ಅಭಿವೃದ್ಧಿ ತರಬೇತಿ ಕರ‍್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದರು.

ಸಾಲ-ಸೌಲಭ್ಯ ಹಾಗೂ ಹತ್ತು ಸಾವಿರದ ಸುತ್ತು ನಿಧಿಯ ಯೋಜನೆಯ ಬಳಕೆಯನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿದ್ದಲ್ಲಿ ಮುಂದಿನ ಹಂತದಲ್ಲಿ ೫೦ ಸಾವಿರದಷ್ಟು ಸುತ್ತು ನಿಧಿಯನ್ನು ಪಡೆದು ರ‍್ಥಿಕವಾಗಿ ತಮ್ಮ ಕುಟುಂಬವನ್ನು ಸದೃಢಗೊಳಿಸಲು ಸಹಕಾರಿಯಾಗುತ್ತದೆ. ರ‍್ಕಾರವು ಮಹಿಳೆಯರು ಸಬಲರಾಗಬೇಕು ದರ‍್ಬಲರಾಗಬಾರದೆಂಬ ಎಂಬ ಉದ್ದೇಶದಿಂದ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ನೀವು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.

ಕೌಶಲ್ಯಾಭಿವೃದ್ದಿಯ ಇಲಾಖೆಯ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೊ ಮಾತನಾಡಿ “ನಗರದ ಬಡ ಜನರ ಅಭಿವೃದ್ಧಿಗಾಗಿ  ಡೇ ನಲ್ಮ್ ಯೋಜನೆ ಜಾರಿಗೊಂಡಿದ್ದು, ಸಾಮಾಜಿಕ ಕ್ರೋಢಿಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿಯ  ಉಪಘಟಕದಡಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚಿಸಿ, ಅವರ ಸಾರ‍್ಥ್ಯ ಹೆಚ್ಚಿಸಿ, ಉಳಿತಾಯವನ್ನು ಮಾಡಿ ಆಂತರಿಕ ಸಾಲವನ್ನು ಪಡೆಯುವ ಮೂಲಕ ತನ್ನ ಕುಟುಂಬದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಈ ಯೋಜನೆಯ ಮೂಲಕ ಸುತ್ತು ನಿಧಿಯನ್ನು  ನೀಡಲಾಗುತ್ತಿದ್ದು, ತಮ್ಮ ಕುಟುಂಬವನ್ನು ರ‍್ಥಿಕವಾಗಿ ಸದೃಢಗೊಳಿಸಲು ಸ್ವಸಹಾಯ ಸಂಘಗಳು ಬೆಂಬಲವಾಗಿ ಕೆಲಸ ಮಾಡಲಿದೆ ಎಂದರು.

ಬೀದಿಬದಿ ವ್ಯಾಪಾರಿಗಳಿಗೆ ಡೇ ನಲ್ಮ್  ಯೋಜನೆಯಲ್ಲಿ ಬೆಂಬಲ ಯೋಜನೆಯನ್ನು ಅಳವಡಿಸಲಾಗಿದ್ದು, ಬೀದಿಬದಿ ವ್ಯಾಪಾರಿಗಳಿಗೆ ತರ‍್ತು ಸಾಲ ನಿಧಿ ಜಾರಿಯಲ್ಲಿದ್ದು, ಹೆಚ್ಚಿನ ವ್ಯಾಪಾರಿಗಳು ಇದರ ಸದ್ಭಾಳಕೆಯನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಿಂದ  ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಲಾಗುತ್ತಿದೆ  ಎಂದು ತಿಳಿಸಿದರು.
ಕರ‍್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಇಂದು,  ಸ್ಥಾಯಿ ಸಮಿತಿಯ ಅಧ್ಯಕ್ಷ ನಾಗಾರಾಜ್ ಪೂಜಾರಿ ಹಾಗೂ ಪುರಸಭಾ ಸದಸ್ಯ  ಒಕ್ಕೂಟದ ಅಧ್ಯಕ್ಷ ಎಸ್ ರೇಖಾ, ಉಪಾಧ್ಯಕ್ಷ ಪರ‍್ಣಿಮಾ, ಸಮುದಾಯ ಸಂಘಟನಾಧಿಕಾರಿ ಮುರಳೀಧರ್, ಗೋಪಾಲ್ ನಾಯಕ್  ಮತ್ತು ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments