ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಮಾತಾನಾಡಿ ಈಶ್ವರಪ್ಪ ಅವರು ಕೆಂಪು ಕೋಟೆಯಲ್ಲಿ ರಾಷ್ಟç ಧ್ವಜವನ್ನು ಇಳಿಸಿ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿರುವುದು ರಾಷ್ಟç ಧ್ವಜಕ್ಕೆ ಅವಮಾನ ಮಾಡಿದಂತೆ. ಬಿಜೆಪಿಯವರು ಏರಿಸುವ ಕೇಸರಿ ಧ್ವಜವನ್ನು ಇಳಿಸಿ ನಾವು ರಾಷ್ಟçಧ್ವಜವನ್ನು ಹಾರಿಸುವ ಮೂಲಕ ನಮ್ಮ ರಾಷ್ಟçಪ್ರೇಮವನ್ನು ನಾವು ತೋರಿಸುವುದು ಖಂಡಿತ ಎಂದು ಸವಾಲನ್ನೆಸೆದರು.
ಜಾತಿ ಜಾತಿಯ ಮಧ್ಯೆ ವಿಷಬೀಜವನ್ನು ಬಿತ್ತುವಂತಹ ಕೆಲಸವನ್ನು ಬಿಜೆಪಿ ಸರಕಾರವು ಮಾಡುತ್ತಿರುವುದು ಅವರ ಇನ್ನೊಂದು ಮುಖವಾಡ. ರಾಷ್ಟçಧ್ವಜಕ್ಕೆ ಅವಮಾನ ಮಾಡಿರುವ ಭ್ರಷ್ಟ ರಾಜಕಾರಣಿ ಕರ್ನಾಟಕದಲ್ಲಿ ಇರಬಾರದು. ರಾಷ್ಟçಧ್ವಜಕ್ಕೆ ಅವಮಾನ ಮಾಡಿರುವುದರಿಂದ ಕೇಸು ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸದಿದ್ದರೆ, ದೇಶದ್ರೋಹದ ಕೇಸು ದಾಖಲಿಸಿದ್ದರೆ ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದರು.
ಈಶ್ವರಪ್ಪ ಅವರ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ದಹಿಸಲಾಯಿತು. ನಂತರ ತಹಶೀಲ್ದಾರ್ ಪುಟ್ಟರಾಜು ಅವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ಪುರಂದರ ದೇವಾಡಿಗ, ಹಿಮಾಯುತ್ತಲ್, ಇಕ್ಬಾಲ್ ಕರೀಂ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ಮುರಳೀಧರ ಕೋಟ್ಯಾನ್, ಪುರುಷೋತ್ತಮ ನಾಯಕ್, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಕಾಂಗ್ರೆಸ್ ಮುಖಂಡರಾದ ರಾಜೇಶ್ ಕಡಲಕೆರೆ, ನಿತಿನ್ ಬೆಳುವಾಯಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 Comments