ಮೂಡುಬಿದಿರೆ: ಶ್ರೀ ಕ್ಷೇತ್ರ ಇರುವೈಲು ಇದರ ವರ್ಷಾವಧಿ ಮಹೋತ್ಸವ ಹಾಗೂ ರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಯಿಯಾದವಳು ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ, ಸದಾ ತನ್ನ ಶಿಶು ಸನ್ಮಾರ್ಗದಲ್ಲಿ ನಡೆಯುವ ದಾರಿಯನ್ನು ತೋರುವಳು,ಹೆತ್ತ ತಂದೆ-ತಾಯಿಗಿಂತ ದೊಡ್ಡ ದೇವರಿಲ್ಲ ಎಂದರು.
ನಂಬಿಕೆ, ವಿಶ್ವಾಸದಿಂದ ನಡೆದಕೊಂಡರೆ ಯಾವುದೇ ಕಾರ್ಯಕ್ಕೆ ಇಳಿದರೂ ಖಂಡಿತವಾಗಿ ಯಶಸ್ವಿ ಯನ್ನು ಕಾಣಲು ಸಾಧ್ಯ ಎಂದರು.
ರಾಜ್ಯ ಹಿಂದೂ ಧಾರ್ಮಿಕ ಪರಿಷತ್ ನ ಸದಸ್ಯ ಕಶೆಕೋಡಿ ಸೂರ್ಯ ನಾರಾಯಣ ಭಟ್ ಮಾತಾನಾಡಿ " ದೇವಿಯ ಸನ್ನಿಧಿಗೆ ಬರುವಾಗ ಯಾರನ್ನೂ ಸಹ ತಾವು ಯಾವ ಜಾತಿಯವ , ಯಾವ ಧರ್ಮದವ ಎಂದು ಕೇಳದಿರಿ, ಗೌರವ ಎಂಬುದು ಇನ್ನೊಬ್ಬ ಕೊಡುವಂಥ ದಲ್ಲ ನಾವು ಹಿಂದೂ ಧಾರ್ಮಿಕ ಪರಿಷತ್ಇರುವ ರೀತಿಯನ್ನು ನೋಡಿ ಉಳಿದವರು ನಮಗೆ ಗೌರವ ಕೊಡುವಂತೆ ಆಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುವ ವರ್ಷಾವಧಿ ಕಾರ್ಯಕ್ರಮಗಳ ಕ್ಯಾಲೆಂಡರ್ ನ್ನು ಅತಿಥಿಗಳು ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹ್ , ಜಿಲ್ಲಾ ಹಿಂದೂ ಧಾರ್ಮಿಕ ಪರಿಷತ್ ಸದಸ್ಯರಾದ ದೇವೆಂದ್ರ ಹೆಗ್ಡೆ ಮತ್ತು ಭುವನಾಭಿರಾಮ ಉಡುಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಐ ಕುಮಾರ್ ಶೆಟ್ಟಿ, ಮೂಡುಬಿದಿರೆ ಕುಮಾರ್ ಎಲೆಕ್ಟ್ರಿಕಲ್ಸ್ ಮಾಲಕ ಹಾಗೂ ಪಂಚಾಯತ್ ಮಾಜಿ ಸದಸ್ಯ ಕುಮಾರ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಿನೇಶ್ ಪೂಜಾರಿ ನಿರೂಪಿಸಿ , ಸತೀಶ್ ಪೂಜಾರಿ ಸ್ವಾಗತ ಕೋರಿ ಪ್ರಕಾಶ್ ಪೆಜತ್ತಾಯ ಧನ್ಯವಾದಗೈದರು.
0 Comments