ಕಳಸದಲ್ಲಿ ಜೈನರ ಮೌನ ಪ್ರತಿಭಟನೆ ಮೆರವಣಿಗೆ

ಜಾಹೀರಾತು/Advertisment
ಜಾಹೀರಾತು/Advertisment



ಕಳಸ: ಇತ್ತೀಚೆಗೆ ದಿನಗಳಲ್ಲಿ ಜೈನ ಧರ್ಮದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮತ್ತು ಜೈನ ಧರ್ಮದ ಮುನಿಗಳ ಬಗ್ಗೆ , ಹಾಗೂ ಜೈನ ಸಮುದಾಯ ಆಚಾರ-ವಿಚಾರ ಸಂಸ್ಕೃತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ , ದೃಶ್ಯಮಾಧ್ಯಮಗಳಲ್ಲಿ , ಕೆಲವು ಕಿಡಿಗೇಡಿಗಳು ಅವಹೇಳನಕಾರಿ ಹೇಳಿಕೆ ಗಳನ್ನು ನೀಡುತ್ತಿರುವುದನ್ನು ಖಂಡಿಸಿ ಕಳಸ ಸಿಮೇಯ 9 ಬಸದಿ ಗಳ ವ್ಯಾಪ್ತಿಯ ಸಮಸ್ತ ಜೈನ ಬಂದವರು ಒಟ್ಟು ಸೇರಿ ಬ್ರಹತ್  ಮೌನ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಶ್ರೀ ಕ್ಷೇತ್ರ ಎನ್.ಆರ್ ಪುರ ಜೈನ ಮಠದ ಪರಮಪೂಜ್ಯ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ಗಳವರ ನೇತೃತ್ವದಲ್ಲಿ ಹಾಗೂ ಪಾವನ ಸಾನಿಧ್ಯದಲ್ಲಿ ಕಳಸ, ಸಂಸೆ‌‍ , ಕುದುರೆಮುಖ, ಹೊರನಾಡು, ಮೇಗುಂದಾ,  ಎಳನೀರು, ಹಿರೇಬೈಲು, ಬಲಿಗೆ, ಚಿಕ್ಕನಕೂಡಿಗೆ ಮತ್ತಿತರ ಗ್ರಾಮಗಳ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೈನ ಸಮಾಜ ಬಾಂಧವರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು,

Post a Comment

0 Comments