ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದಿಂದ ಬೃಹತ್ ಪಾದಯಾತ್ರೆ *ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ : ಸುನಿಲ್ ಆಳ್ವ

ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದಿಂದ ಬೃಹತ್ ಪಾದಯಾತ್ರೆ 

*ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ : ಸುನಿಲ್ ಆಳ್ವ 

ಮೂಡುಬಿದಿರೆ:  ಕಾಂಗ್ರೆಸ್ ಚುನಾವಣಾ ಪೂವ೯ ನೀಡಿದ ಭರವಸೆ ನೀಡಿರುವ ಗ್ಯಾರಂಟಿ ಯೋಜನೆಯಿಂದ ಕಳೆದ ಮೂರು ವಷ೯ಗಳಿಂದ ರಾಜ್ಯವನ್ನು ದಿವಾಳಿ ಮಾಡುವ ಮೂಲಕ ಪಿಂಚಣಿದಾರರಿಗೆ, ಅಂಗನವಾಡಿ, ಆಶಾ ಕಾಯ೯ಕತೆ೯ಯರಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಸಂಬಳ ನೀಡದೆ ಸತಾಯಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಆರೋಪಿಸಿದರು. 

ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಇಲ್ಲಿನ ತಾಲ್ಲೂಕು ಕಚೇರಿ ಎದುರು ನಡೆದ ಜನಾಂದೋಲನ ಮತ್ತು ಬೃಹತ್ ಪಾದಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡಿದರು. 
ಸ್ಥಳೀಯ ಆಡಳಿತಗಳಿಗೆ ಚುನಾವಣೆ ನಡೆಯುತ್ತಿಲ್ಲ, ಸವ೯ರ್ ಸಮಸ್ಯೆಯಿಂದ ಜನರಿಗೆ ಬೇಕಾದ ಕಾಗದ ಪತ್ರಗಳು ಸಿಗುತ್ತಿಲ್ಲ, ಜನನ-ಮರಣ ಪ್ರಮಾಣಪತ್ರಗಳಿಗೆ 5ರಿಂದ 10ಪಟ್ಟು ಏರಿಕೆಯಾಗಿದೆ. ಹಾಲು ಸಹಿತ ಇತರ ವಸ್ತುಗಳಿಗೆ ಬೆಲೆ ಏರಿಕೆಯಾಗಿದೆ ಆದರೆ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಸನ್ನಿವೇಶವಿದ್ದರೂ ಪೆಟ್ರೋಲ್ ದರವನ್ನು ಕೇಂದ್ರ ಏರಿಸಿಲ್ಲವೆಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಂದಿನಿಂದ  ಬಡವರಿಗೆ ನಿವೇಶನ ನೀಡಿಲ್ಲ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಅಭಿವೃದ್ಧಿಗೆ ಅನುದಾನ ಘೋಷಿಸಿದ್ದೀರಿ. ಆದರೆ ಈ ಹಿಂದಿನ ಬಜೆಟ್‍ನಲ್ಲಿ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಏನು ಮಾಡಿದ್ದಾರೆಂದು ಬಹಿರಂಗಪಡಿಸಲಿ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲದೆ ಬೇರೆ ಬೇರೆ ಮೂಲಗಳಿಂದ ಜನರಿಂದ ಹಣ ಸಂಗ್ರಹಿಸಿ ಜನರಿಗೆ ಹೊರೆಯಾಗುತ್ತಿದೆ. ಎಸ್‍ಐಆರ್ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಜನರ ವಿಶ್ವಾಸ ಕಳಕೊಂಡಿರುವ  ಇಂತಹ ಸರಕಾರ ಅಧಿಕಾರದಲ್ಲಿ ಮುಂದುವರಿಯುವುದಕ್ಕೆ ಅರ್ಹತೆ ಇಲ್ಲ ಎಂದರು.

ಬಿಜೆಪಿ ಮಹಿಳಾ ಮೋಚಾ೯ದ ಜಿಲ್ಲಾಧ್ಯಕ್ಷೆ ಮಂಜುಳಾ ಮಾತನಾಡಿ ಕಾಂಗ್ರೆಸ್ ಸರಕಾರ ಅನುದಾನಗಳನ್ನು ಬಿಡುಗಡೆ ಮಾಡದಿರುವುದರಿಂದ ಸ್ಥಳೀಯ ಆಡಳಿತಕ್ಕೆ ಅಧಿಕಾರ ಇಲ್ಲದಂತ್ತಾಗಿದೆ ಎಂದರು.

 ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಮಂಡಲದ ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ, ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್,  ಬಿಜೆಪಿ ಪ್ರಮುಖರಾದ ಶಾಂತಿಪ್ರಸಾದ್ ಹೆಗ್ಡೆ, ಜೋಯ್ಲಸ್ ತಾಕೊಡೆ, ಪುರಸಭೆಯ ಮಾಜಿ ಅಧ್ಯಕ್ಷರಾದ ಪ್ರಸಾದ್, ಜಯಶ್ರೀ ಕೇಶವ್, ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಾಜಿ ಸದಸ್ಯರಾದ ಸುಜಾತ ಶಶಿಕಿರಣ್, ಸೌಮ್ಯ ಶೆಟ್ಟಿ, ಶ್ವೇತಾ ಪ್ರವೀಣ್, ಮುಖಂಡರಾದ ಶಶಿಧರ್ ಅಂಚನ್ ಎನಿಕ್ರಿಪಲ್ಲ, ಚಾವಡಿಮನೆ ಜಗನ್ನಾಥ ಶೆಟ್ಟಿ, ಗೌತಮ್ ರೈ, ಹರೀಶ್ ಎಂ.ಕೆ, ಪ್ರದೀಪ್ ರೈ ಮತ್ತಿತರರು ಭಾಗವಹಿಸಿದ್ದರು. 

ಇದಕ್ಕೂ ಮೊದಲು ವೆಂಕಟರಮಣ ದೇವಸ್ಥಾನದ ಬಳಿಯಿಂದ ತಾಲ್ಲೂಕು ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಯನ್ನು ಕೈಗೊಂಡರು.

Post a Comment

0 Comments

Advertisement