ಸಾಯಿ ಮಾನಾ೯ಡ್ ಸಂಸ್ಥೆಯ 100ನೇ ಯೋಜನೆ ಹಸ್ತಾಂತರ, ಅಸಕ್ತ 5 ಕುಟುಂಬಗಳಿಗೆ ಆಥಿ೯ಕ ನೆರವು, ಸನ್ಮಾನ

ಸಾಯಿ ಮಾನಾ೯ಡ್ ಸಂಸ್ಥೆಯ 100ನೇ ಯೋಜನೆ ಹಸ್ತಾಂತರ, ಅಸಕ್ತ 5 ಕುಟುಂಬಗಳಿಗೆ ಆಥಿ೯ಕ ನೆರವು, ಸನ್ಮಾನ

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.) ತನ್ನ 100ನೇ ಯೋಜನೆಯ ಅಂಗವಾಗಿ ಪಡು ಮಾರ್ನಾಡು ಗ್ರಾಮದ ಮುರಗೋಳಿ ಪರಿಸರದ ಲಕ್ಷ್ಮಿ ಪೂಜಾರ್ತಿ ಅವರ ನವೀಕರಿಸಲಾದ ಮನೆ "ಶ್ರೀ ಲಕ್ಷ್ಮಿ ನಿಲಯ"ದ ಗ್ರಹ ಪ್ರವೇಶ  ಹಾಗೂ 5 ಅಸಕ್ತ ಕುಟುಂಬಗಳಿಗೆ ಧನ ಸಹಾಯ ನೀಡುವ ಕಾಯ೯ಕ್ರಮವನ್ನು ಭಾನುವಾರ ಆಯೋಜಿಸಿತು.

 ಮಾನಾ೯ಡು ಹೊಯಿಪಾಲಬೆಟ್ಟದ ಅನುವಂಶಿಕ ಆಡಳಿತ ಮೊಕ್ತೇಸರ ರಾಜೇಶ್ ಬಲ್ಲಾಳ್ ಸಭಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮನುಷ್ಯ ನೆಮ್ಮದಿಯಾಗಿ ಜೀವನ ನಡೆಸಲು ಆಹಾರ, ಬಟ್ಟೆ ಮತ್ತು ಮನೆ ಅವಶ್ಯಕ. ಇಂತಹ ಅಸಕ್ತ ಕುಟುಂಬಗಳನ್ನು ಗುರುತಿಸಿ ಅವರನ್ನು ಸಹಾಯ ಮಾಡಿದರೆ ಅದನ್ನು ಧಮ೯ ಮೆಚ್ಚುತ್ತದೆ ಇಂತಹ ಉತ್ತಮ ಕೆಲಸವನ್ನು ಸಾಯಿ ಮಾನಾ೯ಡ್ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ : ಪಡುಮಾನಾ೯ಡು ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಗ್ರಾಮದ ಜನರಿಗೆ ಉತ್ತಮ ಸೇವೆಯನ್ನು ನೀಡಿ ಇದೀಗ ಹಳೆಯಂಗಡಿ ಪಂಚಾಯತ್ ಗೆ ವಗಾ೯ವಣೆಗೊಂಡಿರುವ ಸಾಯೀಶ ಚೌಟ ಅವರನ್ನು ಸನ್ಮಾನಿಸಲಾಯಿತು. 

ಮನೆ ನವೀಕರಣಕ್ಕೆ ದೇಣಿಗೆ ನೀಡಿರುವ ದಾನಿಗಳನ್ನು,   ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸುನೀಕ್ಷಾ ಪೂಜಾರಿ ಮಾನಾ೯ಡು ಮತ್ತು ಮನೆ ನಿಮಾ೯ಣಕ್ಕೆ ಸಹಕಾರ ನೀಡಿರುವ ಪ್ರವೀಣ್ ಪೂಜಾರಿ ಸಂಕದ ಬಳಿ ಅವರನ್ನು ಗೌರವಿಸಲಾಯಿತು. 
ಸಾಯಿ ಮಾನಾ೯ಡ್ ಸಂಸ್ಥೆಗೆ ಸನ್ಮಾನ : ತಮ್ಮ ಅಸಹಾಯಕ ಪರಿಸ್ಥಿತಿಯನ್ನು ಗಮನಿಸಿ ಮನೆಯನ್ನು ನವೀಕರಣಗೊಳಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿರುವ ಸಾಯಿ ಮಾನಾ೯ಡ್ ಸಂಸ್ಥೆಯ ಪರವಾಗಿ ಅಧ್ಯಕ್ಷ ಯತೀಶ್ ಮಾನಾ೯ಡ್ ಅವರನ್ನು ಲಕ್ಷ್ಮೀ ನಿವಾಸದವರು ಸನ್ಮಾನಿಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ರಾಜೇಶ್ ಕೋಟೆಗಾರ್, ಪ್ರಸಾದ್ ರಾವ್ ಕುಟೀರ ಮನೆ, ರಾಜೇಶ್ ಕೋಟ್ಯಾನ್, ಬನ್ನಡ್ಕ ಶ್ರೀ ಶಾರದೋತ್ಸವ ಟ್ರಸ್ಟ್ ನ  ಪ್ರಧಾನ ಕಾಯ೯ದಶಿ೯ ಸೂರಜ್ ಜೈನ್ ಮಾನಾ೯ಡ್, ಪಂಚಾಯತ್ ಮಾಜಿ ಸದಸ್ಯ ರಮೇಶ್ ಎಸ್.ಶೆಟ್ಟಿ, ಯತೀಂದ್ರ ಪಾಡಿಮನೆ, ನಿವೃತ್ತ ಮುಖ್ಯ ಶಿಕ್ಷಕ ಜಯ ಬಿ. ಪರಮೇಶ್ವರ್ ಶೆಟ್ಟಿ ಹಾಗೂ ಸಂದೀಪ್ ಸುವಣ೯ ಕೆಲ್ಲಪುತ್ತಿಗೆ ಸಾಂದಭಿ೯ಕವಾಗಿ ಮಾತನಾಡಿದರು. ಸಂಸ್ಥೆಯ  ಕಾಯ೯ದಶಿ೯ ಭರತ್ ಶೆಟ್ಟಿ ಉಪಸ್ಥಿತರಿದ್ದರು.

ಸಚಿನ್ ಆಚಾಯ೯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜ್ವಲ್ ಮತ್ತು ಸೃಜನಿ ಕಾಯ೯ಕ್ರಮ ನಿರೂಪಿಸಿದರು. 

ಇದಕ್ಕೂ ಮೊದಲು ಸ್ಥಳೀಯ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡಿತು. ಸುನೀಕ್ಷಾ ಕಾಯ೯ಕ್ರಮ ನಿರೂಪಿಸಿದರು.

Post a Comment

0 Comments

Advertisement