ಕಾರ್ಮಿಕರಿಗೆ ಮಾರಕವಾಗಿರುವ 4 ಲೇಬರ್ ಕೋಡ್‌ಗಳನ್ನು ರದ್ದುಗೊಳಿಸುವಂತೆ ಸಹಿತ ವಿವಿಧ ಬಡಿಕೆಗಳನ್ನು ಆಗ್ರಹಿಸಿ ಮೂಡುಬಿದಿರೆಯಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಕಾರ್ಮಿಕರಿಗೆ ಮಾರಕವಾಗಿರುವ 4 ಲೇಬರ್ ಕೋಡ್‌ಗಳನ್ನು ರದ್ದುಗೊಳಿಸುವಂತೆ ಸಹಿತ ವಿವಿಧ ಬಡಿಕೆಗಳನ್ನು ಆಗ್ರಹಿಸಿ ಮೂಡುಬಿದಿರೆಯಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ
ಮೂಡುಬಿದಿರೆ : ಕಾರ್ಮಿಕರಿಗೆ ಮಾರಕವಾಗಿರುವ 4 ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕು,  ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಉಳಿಸಬೇಕು ಹಾಗೂ ನೋಂದಣಿ ಮತ್ತು ನವೀಕರಣ ಶುಲ್ಕವನ್ನು ಕಡಿಮೆ ಮಾಡಬೇಕು, ಎಲ್ಲಾ ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕು ಹಾಗೂ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನವನ್ನು ಪಾವತಿಸಿ, ಮೊತ್ತವನ್ನು ಹೆಚ್ಚಿಸಬೇಕು ಮತ್ತು 
ಕಾರ್ಮಿಕರ ಮಾಸಿಕ ಪಿಂಚಣಿಯನ್ನು ರೂ. 5,000/- ಕ್ಕೆ ಹೆಚ್ಚಿಸಬೇಕು ಮತ್ತು ನೇರ ಫಲಾನುಭವಿ ವರ್ಗಾವಣೆ (DBT) ಆಧಾರಿತ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕು ಸಹಿತ 
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ.) ಸಿ.ಐ.ಟಿ.ಯು. ಮೂಡುಬಿದಿರೆ ತಾಲೂಕು ಸಮಿತಿಯ ವತಿಯಿಂದ ಸೋಮವಾರ  ತಾಲೂಕು ಆಡಳಿತ ಸೌಧದ ಮುಂಭಾಗ  ಪ್ರತಿಭಟನೆ ನಡೆಸಿದರು. 
ಕನ್‌ಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾದ (CWFI) ದೇಶವ್ಯಾಪಿ ಕರೆಯನ್ವಯ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ ಕಟ್ಟಡ ಕಾಮಿ೯ಕರ ವಿಚಾರದಲ್ಲಿ ಕೇಂದ್ರ ಸರಕಾರದ ನೀತಿಗೆ ಪೂರಕವಾಗಿ ರಾಜ್ಯ ಸರಕಾರವು ವತಿ೯ಸುತ್ತಿದೆ.
ವೈದ್ಯಕೀಯ ತಪಾಸಣೆ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು, 
ದುಬಾರಿ ವೆಚ್ಚದ ಕೌಶಲ್ಯ ಕೇಂದ್ರ ಮತ್ತು ವಸತಿ ಶಾಲೆ ನಿರ್ಮಾಣ ಯೋಜನೆ ಕೈಬಿಟ್ಟು, ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಿರುವ ಕಾರ್ಮಿಕ ಸೇವಾ ಕೇಂದ್ರಗಳನ್ನು ರದ್ದುಗೊಳಿಸಬೇಕು ಮತ್ತು ಕಾಮಿ೯ಕರ ಕಲ್ಯಾಣಕ್ಕಾಗಿರುವ ಯಾವುದೇ ಯೋಜನೆಗಳನ್ನು ರದ್ದುಗೊಳಿಸಿದರೂ ಸಿಐಟಿಯು ತೀವೃವಾದ ಹೋರಾಟವನ್ನು ಮಾಡುತ್ತದೆ ಎಂದು ಎಚ್ಚರಿಸಿದರು. 

ಮೂಡುಬಿದಿರೆ ತಹಶೀಲ್ದಾರ್ ಪುಟ್ಟರಾಜು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷೆ ರಮಣಿ, ಕಟ್ಟಡ ಕಾಮಿ೯ಕರ ಕಾಯ೯ದಶಿ೯ ಶಂಕರ್ ವಾಲ್ಪಾಡಿ, ಸಿಐಟಿಯುವ ಮೂಡುಬಿದಿರೆ ತಾಲೂಕು ಕಾಯ೯ದಶಿ೯ ರಾಧ, ಕಮಿಟಿ ಸದಸ್ಯ ಕೃಷ್ಣಪ್ಪ ನಡಿಗುಡ್ಡೆ, ಬಿಸಿಯೂಟ ಸಮಿತಿಯ ಜಿಲ್ಲಾ ಕಾಯ೯ದಶಿ೯ ಗಿರಿಜಾ, ಮುಖಂಡರಾದ ಲಕ್ಷ್ಮೀ, ಬೇಬಿ ಭಾಗವಹಿಸಿದ್ದರು.

Post a Comment

0 Comments

Advertisement