ಮೂಡುಬಿದಿರೆ : ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆದ 17ನೇ ವರ್ಷದ ಹೊನಲು ಬೆಳಕಿನ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳದಲ್ಲಿ 138 ಜೊತೆ ಕೋಣಗಳು ಭಾಗವಹಿಸಿದ್ದವು.
ಕನಹಲಗೆ ವಿಭಾಗದಲ್ಲಿ ಮುಂಬೈ ಅಕ್ವಾ ಗ್ರೂಪ್ ಆಫ್ ಹೋಟೆಲ್ ಆಜಾದ್ ಸುರೇಶ್ ಶೆಟ್ಟಿ ಅವರ ಜೋಡಿಗೆ ಬಹುಮಾನ ಬಂದಿದ್ದು ಭಟ್ಕಳ ಪಾಂಡು ಓಡಿಸಿದ್ದಾರೆ.
ಅಡ್ಡಹಲಗೆ ವಿಭಾಗದಲ್ಲಿ ಇರುವೈಲ್ ದೊಡ್ಡಗುತ್ತು ಜಗದೀಶ್ ಎಂ. ಶೆಟ್ಟಿ ( ಪ್ರಥಮ), ತೆಕ್ಕಟ್ಟೆ ಸುಧೀರ್ ದೇವಾಡಿಗ ಕೋಣ ಓಡಿಸಿದವರು. ನಂದಳಿಕೆ ಕಂಪೊಟ್ಟು ವಿಕ್ರಮ್ ನೊರೋನ್ಹಾ ( ದ್ವಿತೀಯ) ಬೈಂದೂರು ರಾಂಪಹಿತ್ಲು ರಾಘವೇಂದ್ರ ಕೋಣ ಓಡಿಸಿದವರು.
*ಹಗ್ಗ ಹಿರಿಯ ವಿಭಾಗದಲ್ಲಿ ವೇಣೂರು ಮೂಡುಕೋಡಿ ಗ್ಯಾನ್ ಗಣೇಶ್ ನಾರಾಯಣ ಪಂಡಿತ್ ( ಪ್ರಥಮ) ಪಡೆದಿದ್ದು, ಉಜಿರೆ ಹೊಸ ಮನೆ ಸ್ಪಂದನ್ ಶೆಟ್ಟಿ ಕೋಣಗಳನ್ನು ಓಡಿಸಿದವರು.
ಮುಡಾರು ಹಚ್ಚೊಟ್ಟು ಫ್ಲೋರಾ ನಿವಾಸ ರೋಹನ್ ರಂಜಿತ್ ಫೆರ್ನಾಂಡೀಸ್ ( ದ್ವಿತೀಯ), ಪಡುಸಾಂತೂರು ಪೃಥ್ವಿರಾಜ್ ಪೂಜಾರಿ ಕೋಣಗಳನ್ನು ಓಡಿಸಿದವರು.
*ಹಗ್ಗ ಕಿರಿಯ ವಿಭಾಗದಲ್ಲಿ 80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಪ್ರಥಮ) ಪಡುಸಾಂತೂರು ಪೃಥ್ವಿರಾಜ್ ಪೂಜಾರಿ ಕೋಣಗಳನ್ನು ಓಡಿಸಿದವರು.
ಬೆಳುವಾಯಿ ದರೆಗುಡ್ಡೆ ಕಮಲ ನಿವಾಸ ಮನನ್ ಕಾರ್ತಿಕ್ ಪೂಜಾರಿ (ದ್ವಿತೀಯ) ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಕೋಣ ಓಡಿಸಿದವರು.
*ನೇಗಿಲು ಹಿರಿಯ ವಿಭಾಗದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ (ಪ್ರಥಮ) ಮಂಗಲ್ಪಾಡಿ ರಕ್ಷಿತ್ ಶೆಟ್ಟಿ ಕೋಣಗಳನ್ನು ಓಡಿಸಿದ್ದರು. 80 ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ದ್ವಿತೀಯ) ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ ಕೋಣಗಳನ್ನು ಓಡಿಸಿದ್ದರು.
*ನೇಗಿಲು ಕಿರಿಯ ವಿಭಾಗದಲ್ಲಿ ಉಳೆಪಾಡಿ ಪುಲ್ಲೋಡಿ ಬೀಡು ಉದಯ ಶೆಟ್ಟಿ -ಬಿ (ಪ್ರಥಮ) ಸುರಾಲು ಗುಂಡಿಬೈಲು ಪ್ರದೀಪ್ ನಾಯ್ಕ್ ಕೋಣಗಳನ್ನು ಓಡಿಸಿದವರು.
ಉಳ್ಳಾಪಾಡಿ ಪುಲ್ಲೋಡಿ ಬೀಡು ಉದಯ ಶೆಟ್ಟಿ - ಎ (ದ್ವಿತೀಯ) ಸುರಾಲು ಗುಂಡಿಬೈಲು ಪ್ರದೀಪ್ ನಾಯ್ಕ್ ಕೋಣಗಳನ್ನು ಓಡಿಸಿದ್ದರು.

0 Comments