ಭಾರತೀಯ ಜನತಾ ಪಾರ್ಟಿ ಮೂಡಬಿದಿರೆ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಳೆಯಂಗಡಿ ಮಹಾಶಕ್ತಿ ಕೇಂದ್ರದ ತೋಕೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಿಂದೂಸ್ಥಾನಿ ಶಾಲೆಯ ವಠಾರದಲ್ಲಿ ನಡೆಯಿತು.
ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ 75ನೇ ಹುಟ್ಟುಹಬ್ಬ ಮತ್ತು 25 ವರ್ಷಗಳ ಸುದೀರ್ಘ ಅವಧಿಯ ರಾಷ್ಟ್ರ ಸೇವೆಯ ಅಂಗವಾಗಿ ನಡೆಯುತ್ತಿರುವ ಸೇವಾ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಲಾಯಿತು.
ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿಂದುಳಿದ ವರ್ಗಗಳ ಮಂಡಲ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಡಲದ ಉಪಾಧ್ಯಕ್ಷರಾದ ವಿನೋದ್ ಬೊಳ್ಳೂರು, ಹಳೆಯಂಗಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಲಕ್ಷೃಣ್ ಸಾಲ್ಯಾನ್, ಮೋರ್ಚಾದ ಮಂಡಲ ಪ್ರಭಾರಿ ಗಳಾದ ಪ್ರಭಾಕರ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಸಂಪತ್ ನೆತ್ತೊಡಿ, ಹೇಮನಾಥ ಅಮೀನ್, ಮೋರ್ಚಾದ ಸದಸ್ಯರಾದ ಪ್ರವೀಣ್ ಕೋಟ್ಯಾನ್, ವಿನೋದ್ ಕುಮಾರ್, ಶಕ್ತಿ ಕೇಂದ್ರ ಪ್ರಮುಖ್ ಲೋಹಿತ್ ಕೋಟ್ಯಾನ್, ಬೂತ್ ಅಧ್ಯಕ್ಷ,, ಕಾರ್ಯದರ್ಶಿ ನಿಕಟಪೂರ್ವ ಪಂಚಾಯತ್ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments