ಪಂಚಾಯತ್ ಗೆ ಅನುದಾನ ಬಿಡುಗಡೆಗೊಳಿಸದಿದ್ದರೆ ತಾ.ಮಟ್ಟದಲ್ಲಿ ಉಗ್ರ ಹೋರಾಟ : ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ ದಿನೇಶ್ ಪುತ್ರನ್
ಮೂಡುಬಿದಿರೆ : ಗ್ರಾ. ಪಂಗಳಿಗೆ ಚುನಾವಣೆ ವಿಳಂಬ ಮಾಡಲಾಗಿದೆ. ಅಭಿವೃದ್ಧಿ ಕುಂಠಿತಗೊಂಡಿದೆ.ದಾರಿ ದೀಪ, ನೀರಿನ ಸಮಸ್ಯೆಯಿಂದ ಜನಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ಕಾಯ೯ಗಳಿಗೆ ಶೀಘ್ರ ಅನುದಾನ ಬಿಡುಗಡೆಗೊಳಿಸದಿದ್ದರೆ ಜನ ಸಾಮಾನ್ಯರನ್ನು ಸೇರಿಸಿ ತಾಲೂಕು ಮಟ್ಟದಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದೆಂದು ಬಿಜೆಪಿ ಮುಲ್ಕಿ ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ರಾಜ್ಯ ಸರಕಾರಕ್ಕೆ ಮಂಗಳವಾರ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯ ಸರಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸದಿರುವುದರಿಂದ ಗ್ರಾಮಮಟ್ಟದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಜನಸಾಮಾನ್ಯರ ಜೀವನ ನಿವ೯ಹಣೆ ಕಷ್ಟದಾಯಕವಾಗಿದೆ ಆದ್ದರಿಂದ ಅನುದಾನ ಬಿಡುಗಡೆಗೊಳಿಸದಿದ್ದರೆ ಕ್ಷೇತ್ರ ವ್ಯಾಪ್ತಿಯ ಜನರನ್ನು ಸೇರಿಸಿ ಹೋರಾಟ ಖಚಿತ ಎಂದು ಎಚ್ಚರಿಸಿದ್ದಾರೆ.

0 Comments