ಮೂಡುಬಿದಿರೆ ರೋಟರಿ ಕ್ಲಬ್ ನಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಾಲರಿ ಗೊಬ್ಬರ ತಯಾರಿಕಾ ಘಟಕ ಹಸ್ತಾಂತರ

ಮೂಡುಬಿದಿರೆ ರೋಟರಿ ಕ್ಲಬ್ ನಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಾಲರಿ ಗೊಬ್ಬರ ತಯಾರಿಕಾ ಘಟಕ ಹಸ್ತಾಂತರ 

ಮೂಡುಬಿದಿರೆ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ  ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರಕ್ಕೆ 
 ಜಾಲರಿ ಗೊಬ್ಬರ ತಯಾರಿಕಾ ಘಟಕ(ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜಾಲರಿಯ ವ್ಯವಸ್ಥೆ.)ವನ್ನು ಮಂಗಳವಾರ 
ಹಸ್ತಾಂತರಿಸಲಾಯಿತು. 

   ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ಡಾ. ಆಶೀರ್ವಾದ್ ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿ  ಸ್ವಚ್ಛ ಮೂಡುಬಿದಿರೆಯ ಪರಿಕಲ್ಪನೆಯನ್ನು ಸಂಸ್ಥೆಯು ಹೊಂದಿದ್ದು ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ  ತ್ಯಾಜ್ಯಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಘಟಕವನ್ನು ನೀಡಲಾಗಿದೆ ಎಂದರು. 

ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಆಹಾರ ತ್ಯಾಜ್ಯ, ಮರಗಳಿಂದ ಬೀಳುವ ಒಣ ಎಲೆಗಳು ಹಾಗೂ ಗಿಡದ ಕಡ್ಡಿಗಳನ್ನು ಉಪಯೋಗಿಸಿ  ಗೊಬ್ಬರವನ್ನು ಮಾಡುವ ಮೂಲಕ ತ್ಯಾಜ್ಯ ನಿವ೯ಹಣೆಯನ್ನು ಮಾಡಿ 'ನಮ್ಮ ಆಸ್ಪತ್ರೆ ಸ್ವಚ್ಛ ಆಸ್ಪತ್ರೆ' ಎಂಬುದಾಗಿ ಮಾಡುವ ಉದ್ದೇಶವನ್ನು ಹೊಂದಿದ್ದು ಇದಕ್ಕೆ ರೋಟರಿ ಕ್ಲಬ್ ಮತ್ತು ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಸಹಕಾರ ನೀಡಿದ್ದಾರೆ. ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸಿ ಅದನ್ನು ಗಿಡಗಳಿಗೆ ಉಪಯೋಗಿಸುವುದಾಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ತಿಳಿಸಿದರು. 

ತಾಂತ್ರಿಕ ಸಹಕಾರ ನೀಡಿರುವ ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ, ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ. ಎಂ, ರೋಟರಿ ಕ್ಲ ಬ್ ಜಯರಾಮ ಕೋಟ್ಯಾನ್, ರತ್ನಾಕರ ಜೈನ್, ಸಂದೀಪ್ ನಾಯಕ್, ಎಸ್. ಎನ್. ಬೋಕ೯ರ್, ಪುರಸಭೆಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದರ್ ನದಾಫ್, ಪುರಸಭೆಯ ಕಮ್ಯೂನಿಟಿ ಮೊಬಿಲೈಸರ್ ಗಳಾದ ಆಶಾ, ಅಮಿತಾ, ಚಂದ್ರಿಕಾ, ಅನುಷಾ, ಆಶಾ ಕಾಯ೯ಕತೆ೯ಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿಗಳು ಈ ಸಂದಭ೯ದಲ್ಲಿದ್ದರು.

Post a Comment

0 Comments

Advertisement