ಆಹಾರವು ಸಂಸ್ಕೃತಿಯ ಪ್ರತಿಬಿಂಬ : ಯುವರಾಜ ಜೈನ್

ಆಹಾರವು ಸಂಸ್ಕೃತಿಯ ಪ್ರತಿಬಿಂಬ : ಯುವರಾಜ ಜೈನ್
ಮೂಡುಬಿದಿರೆ :  ಆಹಾರವೆಂಬುದು ಕೇವಲ ಉದರಪೋಷಣೆಯ ಸಾಧನವಲ್ಲ; ಅದು ಆರೋಗ್ಯದ ಆಧಾರ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಬದುಕಿನ ಶಿಸ್ತಿನ ದ್ಯೋತಕ. ನಾವು ಸೇವಿಸುವ ಆಹಾರದಲ್ಲಿ ವಿವೇಕವಿರಬೇಕು; ನಮ್ಮ ದೈನಂದಿನ ವ್ಯವಹಾರಗಳಲ್ಲಿ ಸೌಜನ್ಯ ಮತ್ತು ಸಮತೋಲನವಿರಬೇಕು. ಆಹಾರ ಪದ್ಧತಿ ಹಾಗೂ ವ್ಯವಹಾರಗಳು ಸರಿಯಾಗಿದ್ದರೆ ಬದುಕು ಅನಗತ್ಯ ಗೊಂದಲಗಳ ಗೂಡಾಗುವುದಿಲ್ಲ ಎಂಬ ಆಶಯವನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ವ್ಯಕ್ತಪಡಿಸಿದರು.

ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಭಾನುವಾರ ಆಯೋಜಿಸಲಾದ ಆಹಾರೋತ್ಸವದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಹಾರ ಸಂಸ್ಕೃತಿಯ ವೈವಿಧ್ಯ, ಸಾಂಪ್ರದಾಯಿಕ ಆಹಾರ ಪದ್ಧತಿಗಳ ಮಹತ್ವ ಹಾಗೂ ಆಹಾರದ ಕುರಿತಾದ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಆಶಯದೊಂದಿಗೆ ಆಯೋಜಿಸಲಾದ ಈ ಉತ್ಸವವು ರುಚಿ, ಸೃಜನಶೀಲತೆ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

 ಖ್ಯಾತ ಕಂಟೆಂಟ್ ಕ್ರಿಯೇಟರ್  ಲಕ್ಷ್ಮಿ ಶೆಣೈ  ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯುವಜನತೆ ಸಾಂಪ್ರದಾಯಿಕ ಆಹಾರ ಪದ್ಧತಿಗಳತ್ತ ಮತ್ತೆ ಒಲವು ತೋರುತ್ತಿರುವುದು ಸಂತಸದ ಸಂಗತಿ.
ಆಹಾರವನ್ನು ಇತರರನ್ನು ಮೆಚ್ಚಿಸುವುದಕ್ಕಾಗಿ ಸೇವಿಸುವುದಕ್ಕಿಂತ, ಅದರ ರುಚಿಯನ್ನು ಆಸ್ವಾದಿಸುತ್ತಾ ಹಸಿವನ್ನು ತೃಪ್ತಿಪಡಿಸಿಕೊಳ್ಳುವುದು ಮುಖ್ಯ. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಮಾತ್ರ ರುಚಿಕರವಾದ ಆಹಾರ ದೊರೆಯುತ್ತದೆ ಎಂಬ ಭಾವನೆ ಸರಿಯಲ್ಲ; ಸಣ್ಣಪುಟ್ಟ ಚಹದ ಅಂಗಡಿಗಳಲ್ಲಿಯೂ ರುಚಿಕರವಾದ ಆಹಾರ ಲಭ್ಯವಿರುತ್ತದೆ. ನಾವು ಸೇವಿಸುವ ಆಹಾರದ ಬಗ್ಗೆ ಗೌರವವಿರಬೇಕು ಎಂದು ಅವರು ತಿಳಿಸಿದರು.

ಕಂಟೆಂಟ್ ಕ್ರಿಯೇಟರ್   ಸುಶಾನ್ ಎ. ಜೆ., 
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸೌರವ್ ಸುದರ್ಶನ್ ಜೈನ್, ಪ್ರಿಯಾ ಕ್ವೀನಿ ರೋಡ್ರಿಗಸ್, ಜನಾರ್ದನ್ ಹಾಗೂ ರಮ್ಯಾ ಎಸ್. ಭಟ್ ಉಪಸ್ಥಿತರಿದ್ದರು. 

ಸಂಸ್ಥೆಯ ಉಪಪ್ರಾಂಶುಪಾಲರಾದ ಸುನಾದ್ ರಾಜ್ ಜೈನ್ ಹಾಗೂ ಅಧ್ಯಾಪಕರಾದ ಜಯಶೀಲ್ ಭಾಗವಹಿಸಿದ್ದರು.

ಕುಮಾರಿ ಮೌಲ್ಯ ವೈ. ಆರ್. ಜೈನ್ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.  ಆರಾಧ್ಯ ಸ್ವಾಗತಿಸಿದರು.  ತನು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Advertisement