ಮೂಡುಬಿದಿರೆಯಲ್ಲಿ ಪೌರ ಕಾಮಿ೯ಕರಿಗೆ ಸನ್ಮಾನ
ಮೂಡುಬಿದಿರೆ : ಬೆಳಿಗ್ಗೆ ನಾವೆಲ್ಲರೂ ಎದ್ದೇಳುವ ಮೊದಲೇ ನಮ್ಮ ಊರು, ಪರಿಸರವನ್ನು ಸ್ವಚ್ಛತೆಗೊಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುವವರು ಪೌರಕಾಮಿ೯ಕರು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ ಹೇಳಿದರು.
ಅವರು ಗಾಂಧಿ ಜಯಂತಿಯ ಪ್ರಯುಕ್ತ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ಶುಕ್ರವಾರ ಮೂಡುಬಿದಿರೆಯಲ್ಲಿ ನಡೆದ ಬೃಹತ್ ಸ್ವಚ್ಛತಾ ಜಾಗೃತಿ ಅಭಿಯಾನದಂಗವಾಗಿ ಕಾಮಧೇನು ಸಭಾಭವನದಲ್ಲಿ ಪುರಸಭೆಯ ಪೌರಕಾಮಿ೯ಕರಿಗೆ ಆಯುಷ್ಮಾನ್ ಕಾಡ್೯ ವಿತರಿಸಿ, ಸನ್ಮಾನಿಸಿ ಮಾತನಾಡಿದರು.
ಸ್ವಚ್ಛತೆ ಕೇವಲ ಎನ್ನುವುದು ಕೇವಲ ಪರಿಸರ ಅಥವಾ ಕಸ ವಿಂಗಡನೆಗೆ ಮಾತ್ರ ಸೀಮಿತವಲ್ಲ ಅದು ಪ್ರತಿಯೊಬ್ಬನ ಮನಸ್ಸನ್ನು ಸ್ವಚ್ಛಗೊಳಿಸುವಂತಿರಬೇಕೆಂದರು.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸ್ವಚ್ಛ ಪರಿಸರದ ಕಲ್ಪನೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾಥಿ೯ಗಳು ಪಠ್ಯದ ಜೊತೆಗೆ ಸ್ವಚ್ಛತೆಯ ಮನಸ್ಸುಗಳನ್ನು ಅಳವಡಿಸಿಕೊಂಡು ದೇಶ ಕಟ್ಟುವಂತ್ತಾಗಬೇಕೆಂದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಪಿ. ಕೆ. ಥೋಮಸ್, ಪರಿಸರ ಅಭಿಯಂತರೆ ಶಿಲ್ಪಾ, ರೋಟರಿ ಕ್ಲಬ್ ನ ಅಧ್ಯಕ್ಷ ಡಾ. ಆಶೀರ್ವಾದ್, ಇನ್ನರ್ ವ್ಹೀಲ್ ಕ್ಲಬ್ ನ ಉಪಾಧ್ಯಕ್ಷೆ ಅನಿತಾ ಶೆಟ್ಟಿ, ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷ ಮುರಳೀಧರ್ ಕೋಟ್ಯಾನ್,
ರೋಟರಿ ಕ್ಲಬ್ ಝೋನ್ 4ರ ಸಹಾಯಕ ಗವನ೯ರ್ ಶ್ರೀಕಾಂತ್ ಕಾಮತ್, ಝೋನ್ 4ರ ವಲಯ ಸೇನಾನಿ ಪೂಣ೯ಚಂದ್ರ ಜೈನ್, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾಯ೯, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ನವೀನ್ ಕಕೇ೯ರಾ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್, ಜವನೆರ್ ಬೆದ್ರದ ಅಧ್ಯಕ್ಷ ಅಮರ್ ಕೋಟೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ನಿತಿನ್ ಬೆಳುವಾಯಿ, ಜೈನ್ ಮಿಲನ್ ನ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್ ಉಪಸ್ಥಿತರಿದ್ದರು.
ರೋಟರಿ ಮೂಡುಬಿದಿರೆ ಟೆಂಪಲ್ ಟೌನ್ ನ ಅಧ್ಯಕ್ಷ ಡೆನ್ನಿಸ್ ಪಿರೇರಾ ಸ್ವಾಗತಿಸಿದರು. ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ನಂತರ ಪ್ರಮಾಣ ವಚನ ಬೋಧಿಸಿದರು. ಪುರಸಭೆಯ ಆಶಾ ವಿವಿಧ ಕ್ರೀಡಾ ಸ್ಪಧೆ೯ಗಳ ಬಹುಮಾನಿತರ ವಿವರ ನೀಡಿದರು. ಪ್ರವೀಣ್ ಪಿರೇರಾ ಕಾಯ೯ಕ್ರಮ ನಿರೂಪಿಸಿದರು. ರೋಟರಿ ಮೂಡುಬಿದಿರೆ ಟೆಂಪಲ್ ಟೌನ್ ನ ಕಾಯ೯ದಶಿ೯ ಜಯಪ್ರಕಾಶ್ ಭಂಡಾರಿ ವಂದಿಸಿದರು.
ಇದಕ್ಕೂ ಮೊದಲು ರೋಟರಿ ಸಂಸ್ಥೆಯ ಬಳಿಯಿಂದ ಸ್ವರಾಜ್ಯ ಮೈದಾನದವರೆಗೆ ನಡೆದ ಸ್ವಚ್ಛತಾ ಜಾಗೃತಿ ಜಾಥಾದಲ್ಲಿ ಪೌರ ಕಾಮಿ೯ಕರು, ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾಥಿ೯ಗಳು ಎನ್.ಎಸ್.ಎಸ್, ಎನ್. ಸಿ.ಸಿ ವಿದ್ಯಾಥಿ೯ಗಳು, ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಸ್ವಚ್ಛತಾ ಘೋಷಣೆಗಳ ಫಲಕಗಳೊಂದಿಗೆ ಜಾಗೃತಿ ಮೂಡಿಸಿದರು.
ಮೂಡುಬಿದಿರೆಯ ವಿವಿಧ 20 ಸಂಘ ಸಂಸ್ಥೆಗಳು ಈ ಜಾಥಾದಲ್ಲಿ ಭಾಗವಹಿಸಿದ್ದವು.

0 Comments