ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಫ್ರೆಶರ್ಸ್ ಡೇ ಸಂಭ್ರಮ

ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಫ್ರೆಶರ್ಸ್ ಡೇ ಸಂಭ್ರಮ

ಮೂಡುಬಿದಿರೆ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ  2026ರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಫ್ರೆಶರ್ಸ್ ಡೇ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು.

 ಕಾಲೇಜಿನ ಸಾಂಸ್ಕೃತಿಕ ಕ್ಲಬ್ ‘ಕಲಾಕೃತಿ’ಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಫ್ರೆಶರ್ಸ್ ಗ್ಲಾಮ್ 2026 ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದ್ದು
ವಿವಿಧ ತಂಡಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 

ಸ್ಪರ್ಧೆಯಲ್ಲಿ ಬಿ ವಿಭಾಗದ ಟೀಮ್ ಜುನೂನ್ ಪ್ರಥಮ,  ಡಿ ವಿಭಾಗದ ಟೀಮ್ ಜೆಜೋರಿಯನ್ಸ್ ದ್ವಿತೀಯ ಸ್ಥಾನ ಪಡೆದು ರನ್ನರ್ಸ್ ಪ್ರಶಸ್ತಿಗೆ ಭಾಜನರಾದರು. ಅತ್ಯುತ್ತಮ ನಿರೂಪಕ ಪ್ರಶಸ್ತಿಯನ್ನು ಸಿ ವಿಭಾಗದ ಟೀಮ್ ಯೆನ್ ಔರಾ ತಂಡದ ಸನಾ ಫಾತಿಮಾ ಅವರು ಪಡೆದುಕೊಂಡರು.
ವಿಜೇತ ತಂಡಕ್ಕೆ ಕಾಲೇಜಿನ ಡೀನ್ (ಅಕಾಡೆಮಿಕ್ಸ್) ಡಾ. ಮೆಲ್ವಿನ್ ಡಿಸೋಜಾ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು  ಟ್ರೋಫಿ ಪ್ರದಾನ ಮಾಡಿದರು. 

ಪ್ರಥಮ ವರ್ಷದ ವಿದ್ಯಾರ್ಥಿಗಳ ಉತ್ಸಾಹ ಮತ್ತು ಮನರಂಜನೆಗಾಗಿ ವಿವಿಧ ಸ್ಪಾಟ್ ಗೇಮ್ಗಳನ್ನು ಆಯೋಜಿಸಲಾಗಿದ್ದು
 ಹೊಸ ವಿದ್ಯಾರ್ಥಿಗಳಲ್ಲಿ ಸ್ನೇಹ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಬೆಳೆಸುವ ವೇದಿಕೆಯಾಯಿತು.

Post a Comment

0 Comments

Advertisement