ಬಿಜೆಪಿ ಎಸ್. ಟಿ ಮೋಚಾ೯ದಿಂದ ಮೂಡುಬಿದಿರೆಯಲ್ಲಿ 'ಪ್ಲಾಸ್ಟಿಕ್ ಮುಕ್ತ ಜಾಗೃತಿ ಕಾಯ೯ಕ್ರಮ'*ಏಕ ಬಳಕೆಯ ಪ್ಲಾಸ್ಟಿಕ್ ಬಳಸದೆ ಮಾದರಿಯಾಗೋಣ

ಬಿಜೆಪಿ ಎಸ್. ಟಿ ಮೋಚಾ೯ದಿಂದ ಮೂಡುಬಿದಿರೆಯಲ್ಲಿ 'ಪ್ಲಾಸ್ಟಿಕ್ ಮುಕ್ತ ಜಾಗೃತಿ ಕಾಯ೯ಕ್ರಮ'

*ಏಕ ಬಳಕೆಯ ಪ್ಲಾಸ್ಟಿಕ್ ಬಳಸದೆ ಮಾದರಿಯಾಗೋಣ

ಮೂಡುಬಿದಿರೆ : ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಸೇವೆ ನನ್ನ ಯೋಗದಾನ ಕಾಯ೯ಕ್ರಮದಡಿಯಲ್ಲಿ ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲ ಎಸ್. ಟಿ. ಮೋಚಾ೯ದ ವತಿಯಿಂದ 'ಪ್ಲಾಸ್ಟಿಕ್ ಮುಕ್ತ ಜಾಗೃತಿ' ಕಾಯ೯ಕ್ರಮವು ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆಯಿತು. 
 ಪುರಸಭೆಯ ಸ್ವಚ್ಛತಾ ರಾಯಭಾರಿ ಸಂಧ್ಯಾ ಅವರು ಜಾಗೃತಿಯನ್ನುದ್ದೇಶಿಸಿ ಮಾತನಾಡಿ ನಾವು ಬಳಸುವ ಏಕ ಬಳಕೆಯ ಪ್ಲಾಸ್ಟಿಕ್ ನಿಂದ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಮತ್ತು ಹಲವು ಜೀವರಾಶಿಗಳ ಪ್ರಾಣಕ್ಕೆ ಕುತ್ತು ತರುತ್ತದೆ ಆದ್ದರಿಂದ ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ತ್ಯಜಿಸಿ ಮರು ಬಳಕೆಯ ಬಟ್ಟೆಯ ಚೀಲಗಳನ್ನು ಬಳಸುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗುವ  ಮೂಲಕ ನಮ್ಮ ಊರು, ದೇಶವನ್ನು ಸ್ವಚ್ಛತೆಯಿಂದ ಕಾಪಾಡೋಣ ಎಂದರು. 
  ನಂತರ ಸಂತೆಗೆ ಪ್ಲಾಸ್ಟಿಕ್ ಚೀಲಗಳೊಂದಿಗೆ ತರಕಾರಿ ತೆಗೆದುಕೊಳ್ಳಲು ಬಂದಿರುವ ಗ್ರಾಹಕರಿಗೆ ಬಟ್ಟೆಯ ಚೀಲಗಳನ್ನು ನೀಡಿ  ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಯಿತು.

ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪುತ್ತಿಗೆ ಮಾಹಾಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್ ಅಮೀನ್, ಪುತ್ತಿಗೆ ಮಹಾಶಕ್ತಿ ಕೇಂದ್ರದ ಕಾಯ೯ದಶಿ೯ ಶಿವಕುಮಾರ್ ಯುವಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಓಬಿಸಿ ಮೊರ್ಚಾ ಅಧ್ಯಕ್ಷ ಪ್ರದೀಪ್ ವಾಲ್ಪಾಡಿ,  ಮಂಡಲದ ಕೋಶಾಧಿಕಾರಿ ಪ್ರಭಾಕರ್ ಕುಲಾಲ್, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಬೆಳುವಾಯಿ ಶಕ್ತಿ ಕೇಂದ್ರದ ಪ್ರಮುಖ್ ರೋಶನ್ ಬೆಳುವಾಯಿ, ಓಬಿಸಿ ಮೋಚಾ೯ದ ಪ್ರ. ಕಾಯ೯ದಶಿ೯ ಸಂಪತ್ ನೆತ್ತೋಡಿ,  ರಾಜೇಶ್ ನಾಯಕ್ ಭಾಗವಹಿಸಿದ್ದರು. 
 ಎಸ್. ಟಿ. ಮೋಚಾ೯ದ ಮಂಡಲ ಅಧ್ಯಕ್ಷ ಅಣ್ಣಪ್ಪ ಕೆ. ಎಸ್. ಸ್ವಾಗತಿಸಿದರು. ಬನ್ನಡ್ಕ ಶಕ್ತಿ ಕೇಂದ್ರದ ವಂದನಾ ಪ್ರಭು ವಂದಿಸಿದರು.

Post a Comment

0 Comments

Advertisement