ಮೂಡುಬಿದಿರೆ: ಪಣಪಿಲದಲ್ಲಿ ನವಂಬರ್ 7ರಂದು ನಡೆಯಲಿರುವ ಜಯ ವಿಜಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆಯನ್ನು ಇಂದು ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಣಪಿಲ ಅರಮನೆಯ ಮುಖ್ಯಸ್ಥರಾದ ಶ್ರೀ ವಿಮಲ್ ಕುಮಾರ್ ಶೆಟ್ಟಿ, ಜಯ ವಿಜಯ ಜೋಡಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್, ಕಾರ್ಯಧ್ಯಕ್ಷರಾದ ಶ್ರೀ ಸುಭಾಷ್ ಚಂದ್ರ ಚೌಟ, ಪ್ರಧಾನ ಕಾರ್ಯದರ್ಶಿ ಶ್ರೀ ಅಶ್ವತ್ ಪಣಪಿಲ, ಪ್ರಮುಖರಾದ ಶ್ರೀ ಮುನಿರಾಜ್ ಹೆಗ್ಡೆ, ವಿಶ್ವನಾಥ್ ಕೋಟ್ಯಾನ್, ಭುಜಂಗ ಹೆಗ್ಡೆ, ಜಯಂತ್ ಹೆಗ್ಡೆ, ಉದಯ ಪೂಜಾರಿ ಸೇರಿದಂತೆ ಇತರೆ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಬಾರಿ ಹಿರಿಯ ಕೋಣಗಳ ಹೊನಲು ಬೆಳಕಿನ ಕಂಬಳ..17ನೇ ವರ್ಷದ ಜೋಡು ಕರೆ ಕಂಬಳದಲ್ಲಿ ಈ ಬಾರಿ ಹಿರಿಯ ಕೋಣಗಳನ್ನು ಸ್ಪರ್ಧೆಗೆ ಆಹ್ವಾನಿಸಲ ಆಹ್ವಾನಿಸಲು ನಿರ್ಧರಿಸಲಾಗಿದೆ. ಈವರೆಗೆ ಕಿರಿಯ ವಿಭಾಗ ಮಾತ್ರವೇ ಸ್ಪರ್ಧೆಯಲ್ಲಿ ಇದ್ದಿದ್ದು ಮೊಟ್ಟಮೊದಲ ಬಾರಿಗೆ ಹಿರಿಯ ವಿಭಾಗಕ್ಕೆ ಅವಕಾಶ ನೀಡಲಾಗಿದೆ. ಈ ನಿಮಿತ್ತ ವಿಶೇಷ ತಂಡಗಳನ್ನು ರಚಿಸಿದ್ದು ಸುಮಾರು 5 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲು ಸಮಿತಿ ಸಜ್ಜಾಗಿದೆ. ಹೀಗಾಗಿ ಈ ಬಾರಿ ಹೊನಲು ಬೆಳಕಿನ ಕಂಬಳ ಆಯೋಜನೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಅಶ್ವತ್ ಪಣಪಿಲ ಇವರು ವಿವರಿಸಿದ್ದರು.
ಹರೇಕಳ ಹಾಜಬ್ಬರಿಗೆ ಸನ್ಮಾನ...ಈ ಬಾರಿ ಕಂಬಳ ಕಾರ್ಯಕ್ರಮದ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ರವರಿಗೆ ವಿಶೇಷ ಅಭಿನಂದನ ಕಾರ್ಯಕ್ರಮ ನೆರವೇರಲಿದೆ. ಹಾಗೂ ಕಂಬಳ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರಮುಖರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.

0 Comments